ಪರಮಪುರುಷ ನೀ ನೆಲ್ಲಿಕಾಯಿ
ಸರಸಿಯೊಳಗೆ ಕರಿ ಕೂಗಲುಕಾಯಿ
ಹಿರಿದು ಮಾಡಿದ ಪಾಪ ನುಗ್ಗೆಕಾಯಿ
ಹರಿ ನಿನ್ನ ಧ್ಯಾನ ಬಾಳೆಕಾಯಿ
ಸರುವ ಜೀವರಿಗುಣಿಸಿಯುಂ ಬದನೆಕಾಯಿ
ಅರಿಷಡ್ಬರ್ಗಗಳೊದಗಿಲಿಕಾಯಿ
ಕ್ರೂರವ್ಯಾಧಿಗಳೆಲ್ಲ ಹೀರೆಕಾಯಿ
ಘೋರ ದುಷ್ಕೃತಗಳು ಸೋರೆಕಾಯಿ
ಭಾರತ ಕಥೆ ಕರ್ಣ ತುಪ್ಪಿರೆ ಕಾಯಿ
ವಾರಿಜಾಕ್ಷನೆ ಗತಿಯೆಂದಿಪ್ಪೆ ಕಾಯಿ
ಮುರಹರ ನಿನ್ನವರು ಅವರೆಕಾಯಿ
ಗುರು ಕರುಣಾಮೃತ ಉಣಿಸಿಕಾಯಿ
ವರ ಭಕ್ತ ವತ್ತಲನೆಂಬ ಹೆಸರಕಾಯಿ
ಸಿರಿಯಾದಿ ಕೇಶವ ನಿನ್ನ ನಾಮ ಮೆಣಿಸೆಕಾಯಿ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಅನುಭಾವದ ನಿಗೂಢ ಮುಂಡಿಗೆಗಳು