ಕೀರ್ತನೆ - 288     
 
ಪಕ್ಷಿಯ ಕುರುಹ ಬಲ್ಲರು ಪೇಳಿರಿ - ತನ್ನ ಮಕ್ಕಳಿಗೆ ವೈರಿ ಮೂಜಗದೊಳಗೆಲ್ಲ ಬಣ್ಣ ಬಣ್ಣದ ಪಕ್ಷಿ ಅದಕೆ ವೆಜ್ಜಗಳುಂಟು ಕಣ್ಣು ಮುಚ್ಚಲಿಲ್ಲ ತೆರೆಯಲಿಲ್ಲ ಹುಣ್ಣಿಮೆ ಮುಂದಿನ ಬೆಳಗಲಿ ಬಾಹೋದು ತಣ್ಣನೆ ಹೊತ್ತಲಿ ತವಕಗೊಂಬುವುದು ಕೆ೦ಬಲ್ಲಿನ ಪಕ್ಷಿ ಕೊಂಬುದು ರಸಗಳ ಹಂಬಲ ಮಾಳುದು ಹರುಷದಿಂದ ತುಂಬಿ ವರ್ಣನ ತೆತ್ತವೆ ನಾಲ್ಕು ರವೆ ಎಂಟು ಜಾ೦ಬವರು ಮೆಚ್ಚುವರು ಜಾಣರಿಗಳವಲ್ಲ ಉಂಡರೂ ದಣಿಯದು ಊರ ಸೇರದ ಪಕ್ಷಿ ಮಂಡೆಯ ಮೇಲೆರಡು ಕೋಡದಕೆ ಗುಂಡಿಗೆಯೊಳು ಮೂಲಗಳುಂಟು ಧರೆಯೊಳು ಗಂಡನ ನುಂಗುವುದು ಗಜಮುಖದ ಪಕ್ಷಿ ಗಿಡ್ಡ ಮೀಸೆಗಳುಂಟು ಗರುಡ ಎನಬೇಡಿ ಒಡ್ಡನಪ್ಪಿ ಬಾಹೋದು ವರುಷಕೊಮ್ಮೆ ಗುಡ್ಡದೊಳಿರುವುದು ದೊರೆಗಳಿಗಂಜದು ಹೆಡ್ಡರಿಗಳವಲ್ಲ ಹೇಮ ವರ್ಣದ ಪಕ್ಷಿ ಹಕ್ಕರಿಕೆ ಗರಿಯಂತೆ ಹರವು ರೆಕ್ಕೆಗಳು೦ಟು ಒಕ್ಕಲು ಮೇಲದು ಒಲಿದವಗೆ ದಿಕ್ಕಿನಲ್ಲಿ ಕಾಗಿನೆಲೆಯಾದಿಕೇಶವನ ಮುಕ್ಕಣ್ಣನವತಾರ ಹನುಮಂತ ಬಲ್ಲ