ಕೀರ್ತನೆ - 287     
 
ನಿಜವರಿತು ಲಿಂಗವನು ಪೂಜೆ ಮಾಡುವರಾರು ನಿಜನೇಮ ನಿಷ್ಠೆಯೊಳು ನಿಂದವರ ತೋರು ಆತ್ಮವೆಂಬುದರೊಳಗೆ ಅಮೃತ ಚಿಲುಮೆಯ ತೆಗೆದು ನೀತಿ ಮಾರ್ಗವೆನ್ನುವ ಕೊಡನ ಪಿಡಿದು ಮೂತೆರದ ಭೇದಗಳ ಕಡಿದು ಕಣ್ಣಿಯ ಮಾಡಿ ಚಿತ್‌ ಲಿ೦ಗಕಗ್ಗವಣಿ ತಂದವರ ತೋರು ಪಂಚ ಪ್ರಾಣಗಳ ಗೊತ್ತುಗುರಿ ಜಾಡನು ತಿಳಿದು ಪ೦ಚಾಕ್ಷರಿಯೆಂಬ ಅರಮನೆಯೊಳಗೆ ಪ೦ಚಭೂತಗಳೆಂಬ ಬಯಲ ಜಗಲಿಯೇರಿ ಪ್ರ- ಪ೦ಚಧರ ಚಿಹ್ನೆಯನು ಕಾಣುವರ ತೋರು ಮೂಲವಾಸನೆಯಳಿದು ಕಾಯ ವಾಸನೆ ಕಳೆದು ಮೇಲೆ ಕಾರುಣ್ಕನೆಲೆಯೆಂಬುದನು ಕಂಡು ನಾಲಗೆಯಿರದ ಗಂಟೆ ನಾದದಲೆಯನು ಕೇಳಿ ಸಲೆ ಸೂರ್ಯಚಂದ್ರರೆಡ ಸುಳಿದವರ ತೋರು ಅಂತರಂಗದೊಳಗೆ ಅಷ್ಟಜ್ಯೋತಿಯನಿಟ್ಟು ದಂತಿ ಎ೦ಟನು ಪಿಡಿದು ತರಿದು ಬಿಸುಟು ಆಂತರ್ಯದ ಸಂತತ ಭೇರಿ ಶಬ್ದವ ಕೇಳಿ ಅಂತರಾತ್ಮ ಲಿಂಗವ ಪೂಜಿಪರ ತೋರು ಪರಬಹ್ಮ ತನ್ನೊಳಗೆ ಪರಿಪೂರ್ಣವಾಗಿರಲು ಪರಂಜ್ಯೋತಿ ಲಿಂಗವ ಬಯಸಿ ನೋಡು ವರ ಬಾಡಬಂಕಾಪುರದ ಆದಿಕೇಶವನ ಕುರಿತು ತಿಳಿಯೊ ಹಳೆಗನ್ನಡದ ಸೊಬಗ