ಕೀರ್ತನೆ - 285     
 
ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದು ನೆಂಪು ಬಲ್ಲವರು ಪೇಳಿ ಹಂಪೆಯ ವಿರೂಪಾಕ್ಷ ಲಿ೦ಗನಲ್ಲಿ ಝಂಪೆಯನಾಡುತಿಹುದು ಆರು ತಲೆ ಹದಿನಾರು ಕಣ್ಣುಗಳುಂಟು ಮೂರು ಮೂರು ನಾಲಗೆ ಬೇರೆ ಹನ್ನೆರಡು ಕಣ್ಣು ಕಿವಿಗಳು೦ಟು ಸೇರಿತು ತೆಂಕಲಾಗೆ ಬಲೆಯ ಬೀಸಿದರು ಸಿಕ್ಕದಾ ಮೃಗ ಜಲದೊಳು ತಾ ನಿಲ್ಲದು ನೆಲನ ಮೇಲಿರುವುದು ನಿಂತರೆ ಸಾವುದು ಕುಲದೊಳಗಾಡುತಿಹುದು ಸಕಲ ಕಲೆಯು ಬಲ್ಲ ಸೀತಳ ಮಲ್ಲಿಗೆ ಬೇರೆ ಬೇರೆನಬಹುದು ಚೆನ್ನ ಕೇಶವನಲ್ಲಿ ಕೃಪೆಯುಂಟಾದರೆ ಅಲ್ಲುಂಟು ಇಲ್ಲಿಲ್ಲವೆ