ಎರಡು ಸಾವಿರದ ಜಿಹ್ವೆಯುರಗ ಪೊಗಳಿದ ಹರಿಯೆ
ಪರಂಜ್ಯೋತಿ ಪರಬ್ರಹ್ಮ ಪರಮಪುರುಷ ಓಂ ಎಂ
ಹುಟ್ಟು ಬಣ್ಣ ಒ೦ದರೊಳಗೆ ಕಟ್ಟು ಬಣ್ಣ ಒ೦ದು ಮಾಡಿ
ಕಟ್ಟಿ ಕುಟ್ಟಿ ಕಾಸಿ ಕರಗಿ ಮೂರು ಬಣ್ಣವ
ಮುಟ್ಟಿ ಮಾಡಿ ನಾಲ್ಕು ಬಣ್ಣ ಒಪ್ಪವಿಕ್ಕಿ ಅದರ ಮೇಲೆ
ಗಟ್ಟಿಯಾಗಿ ನೆಲೆಗೆ ನಿಂತವೈದು ಬಣ್ಣವು
ಸೃಷ್ಟಿಯಾರೇಳು ಬಣ್ಣ ಎಂಟು ಒ೦ಬತ್ತರೊಳಗೆ
ನೆಟ್ಟನೆ ಹತ್ತು ಹನ್ನೊಂದು ಹನ್ನೆರಡು ತೋರುವ
ಘಟ್ಟಿ ಹದಿಮೂರು ಹದಿನಾಲ್ಕು ಹದಿನೈದರಿಂದ
ಕಟ್ಟಕಡೆಗೆ ನಿಂದ ಹದಿನಾರು ಬಣ್ಣ ಓ೦ ಎಂದು
ಭದ್ರಕಂಬ ಒ೦ದರೊಳಗೆ ಉದ್ದವಾದ ಕೊನೆಯ ಮೇಲೆ
ಸಿದ್ದಿಯಾದ ಚಿಗುರು' ಹೂವು ಕಾಯಿ ಹಣ್ಣನು
ಮೆದ್ದು ಹೋದ ಪಕ್ಷಿ ಬ೦ದು ಹದ್ದು ಹಿಡಿದು ಉದ್ದಕೆತ್ತಿ
ಬುದ್ಧಿ ಹೀನನಾಗಿ ಬೆಳೆದು ಧರೆಗೆ ಬಿದ್ದುದ
ಕದ್ದು ಮತ್ತೊಬ್ಬ ತರುತಿದ್ದ ದಾರಿಯನ್ನು ಕಟ್ಟಿ
ಒದ್ದು ಹಿಡಿದು ಗುದ್ದಿ ನೂಕಿ ಸೆಳೆದುಕೊಂಡುದ
ಸಾಧ್ಯವಾಯಿತೆಂದು ತನ್ನ ಮನೆಗೆ ತಂದು ಸತಿಗೆ ಕೊಡಲು
ಶುದ್ಧವಾಗಿ ಸುಟ್ಟು ಮಡಗಲೆದ್ದು ಹಾರಿ ಹೋಯಿತೆಂದು
ತಿಳಿಯುತಿಹುದು ತಿಳಿಯದಿಹುದು ಬೆಳೆಯುತಿಹುದು ಬೆಳೆಯದಿಹುದು ಹೊಳೆಯುತಿಹುದು ಹೊಳೆಯದಿಹುದು ಸುಳಿಯದಿಹುದು
ತಿಳಿದು ನಾಲ್ಕು ದಿಕ್ಕಿನಲ್ಲಿ ಹೊಳೆದು ಎಂಟು ದಿಕ್ಕ ತೋರಿ
ಬಳಸಿ ಸುತ್ತ ತಿರುಗುತಿಹುದು ಬಳಲಿ ಬಳಲದೆ
ಒಳಗೆ ಹೊರಗೆ ತೋರುತಿಹುದು ಅಳಿದ ವಸ್ತು ಮುಟ್ಟದಿಹುದು
ಕಳವಳಂಗೆ ಎರಡು ಗುಣವ ತೋರಿ ಮೆರೆವುದು
ತಿಳಿದು ನೋಡೆ ಕೈಗೆ ಸಿಕ್ಕಿ ಒಳಗೆ ಬಯಲ ತೋರುತಿಹುದು
ಪ್ರಣವ ಒಂದು ಕೋಟಿ ನುಂಗಿ ಉಗುಳಿತಿಪ್ಪುದೋ೦ ಎಂದು
ತತ್ತಿಯಾದ ಬ್ರಹ್ಮನೀಗೆ ದಿಕ್ಕು ಅಖಿಲಾ೦ಡವೆಲ್ಲ
ಹೆತ್ತ ತ೦ದೆಗಾದವನೆ ನಿತ್ಯವುಳ್ಳವ
ಸತ್ತು ಹುಟ್ಟಲಿಲ್ಲವೆ೦ದು ಅತ್ತ ನೋಡಿ ಇತ್ತ ತಿರುಗೆ
ತತ್ತಿಯೊಳಗೆ ಬೆಳೆದವೆಲ್ಲ ಸತ್ತವೆನ್ನುತ
ಸತ್ತು ಹೋದ ದೀಪದಂತೆ ಉತ್ಪತ್ತಿಯಾದವಗೆ
ಸತ್ತು ಸತ್ತು ಹುಟ್ಟುವುದು ತಪ್ಪದೆನ್ನುತ
ಎತ್ತಿ ಜಗವ ನುಂಗಿ ತನ್ನ ಹೊಟ್ಟೆಯೊಳಿಂಬಿಟ್ಟುಕೊಂಡು
ಕತ್ತಲೆಗೆ ಕರ್ತೃವೆಂಬ ಜಗವಸತ್ಯ ಕೇಳಿರೋ ಎಂದು
ಪಂಕಜನ ತಾಯಿ ಸುತನ ಅಂಕದಲ್ಲಿ ಹುಟ್ಟಿ ಜಗವ
ಮಂಕು ಮಾಡುತಿಪ್ಪ ಮಾಯೆ ಹತ್ತು ಶಂಕೆಯ
ಶಂಕೆಕಾರ ಶತ್ರುಮಿತ್ರರಿಬ್ಬರಿಗಾಧಾರವೆಂದು
ಕುಂಕರದಿಪ್ಪತ್ತೊಂದು ಕೋಟಿ ಪಾಶವು
ಓ೦ಕಾರದೊಳಗೆ ಪುಟ್ಟಿ ಓ೦ಕಾರದೊಳಗೆ ಬೆಳೆದು
ಓ೦ಕಾರದೀ ಜಗವ ಎತ್ತಿ ಮೆರೆವುದೋ ಎಂದು
ಪ್ರಣವ ಒ೦ದರೊಳಗೆ ಒಂದು ಕೋಟಿಯನ್ನು ತೋರಿ ಪಡೆಯ (ಕಡೆಯ ?) ಕುಣಿಕೆಯೊಳಗೆ ಎಂಟು ಕೋಟಿಯನ್ನು ತೋರುತ
ತೃಣವ ಹಿಡಿದು ಬರೆಯುತಿಪ್ಪ ಒ೦ದು ರೋಮ ಕೂಪದಲ್ಲಿ
ಕುಣಿಕೆಯೊಳಗೆ ಜಗದ ಜೀವರಾಶಿ ಎಲ್ಲವ
ಸುಳಿದ ವಿಷ್ಣು ಬ್ರಹ್ಮನೆಂಬ ಹಣೆಯ ಕಣ್ಣ ರುದ್ರನೆಂಬ
ಮಣೆಯಗಾರರೆಪ್ಪತ್ತೇಳು ಕೋಟಿ ಸಂಖ್ಯೆಯು
ಹಣೆಯ ಕಾಣದವರ ಕೀಲಿನೆಣಿಕೆಯಲ್ಲಿ ಹೊಲಬುದಪ್ಪಿ
ಪ್ರಣವ ಒಂದು ಕೇಳುತಿಪ್ಪ ಪರಬ್ರಹ್ಮ ಓಂ ಎಂದು
ನಳಿನಜಾಂಡವೊಂದರೊಳಗೆ ಭುವನ ಪದಿನಾಲ್ಕು ಬಸು-
ರೊಳಗೆ ಇಂತು ತಮ್ಮ ಸುಳಿ ನಾಭಿ ಕಮಲ ಮಧ್ಯದಿ
ತಿಳಿದು ನೋಡು ಇತ್ತ ಕೆಳಗೆ ಪಾದ ಮೇಲೆ ಮಸ್ತಕವು
ತೊಳಲಿ ಕಾಣೆ ವೇದವೆಂದು ಬಳಲಿ ಬಳಲದೆ
ಪ್ರಳಯ ಕೋಟಿ ಪ್ರಾಣಿಗಳಿಗೆ ಹೊಳವುಗಾಣಲೀಸದಂತೆ
ಬೆಳೆದು ಹೋಗುವ ಗತಿಯೆಂಬುದಿತ್ತಲರಿಸುತ
ಕಳವಿನವರು ಬ೦ದು ಇಳೆಯ ಮೇಲೆ ನಿಂದು
ಬಿಳಿಗಿರಿವಾಸ ತಿರುಮಲೇಶ ಆದಿಕೇಶವ ತಾನೆಯೆಂದು
Music Courtesy:
Video
Transliteration
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಕನಕದಾಸರ ಕೀರ್ತನೆಗಳುವಿಷಯ -
ಅನುಭಾವದ ನಿಗೂಢ ಮುಂಡಿಗೆಗಳು