ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿ
ಹರಿಮಧ್ಯೆ ಹರಿಗಮನೆ
ಹರಿಯ ನಂದನ ಸಖನೆನಿಪ ಅಹೋಬಲದ
ಹರಿಯ ನೀ ತಂದು ತೋರೆ
ಎರವಿನ ತಲೆಯವನಣ್ಣನಯ್ಯನ
ಪರಮ ಸಖನ ಸುತನ
ಹಿರಿಯಣ್ಣನಯ್ಯನ ಮೊಮ್ಮನ ಮಾವನ
ತಂದೊಟ್ಟಿದನ ಹಗೆಯ
ಗುರುವಿನ ಮುಂದೆ ಮುಂದಿಹ ಬಾಹನ
ಕಿರಿಯ ಮಗನ ರಾಣಿಯ
ದುರುಳತನದಿ ಸೆಳೆದುಕೊಂಡನ ಕೊಂದನ
ತರಳೆ ನೀ ತಂದು ತೋರ
ಸೋಮನ ಜನಕನ ಸತಿಯ ಧರಿಸಿದನ
ರೋಮ ಕೋಟಿಯೊಳಿಟ್ಟಹನ
ಕಾಮಿನಿ ಸತಿಯ ಕಂದನ ತಮ್ಮಗೊಲಿದನ
ಭಾಮೆ ನೀ ತಂದು ತೋರೆ
ಶ್ರುತಿಯನುದ್ಧರಿಸಿ ಭೂಮಿಯ ಪೊತ್ತು ಅಡವಿಯ
ಪಥದೊಳು ತಿರುಗಿದನ
ಅತಿಶಯ ನರಹರಿ ವಾಮನ ರೂಪಿನ
ಹಿತನ ಮೋಹದ ರಾಣಿಯ
ಹತ ಮಾಡಿ ಸತ್ಯಕ್ಕೆ ನಿಂತು ನಗವ ಹೊತ್ತು
ಪತಿವ್ರತೆಯರ ಭಂಗಿಸಿ
ಕ್ಷಿತಿಯೊಳು ರಾಹುತನಾದ ಬಾಡ
ದಾದಿಕೇಶವನ ತಂದು ತೋರೆ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಪೌರಾಣಿಕ ವಾವೆವರಸೆಯ ಮುಂಡಿಗೆಗಳು