ಕೀರ್ತನೆ - 277     
 
ವಾರಿಜ ಮುಖಿ ವಾರಿಜಾಕ್ಷಿ ವಾರಿಜ ಗಂಧಿ ವಾರಿಸನಳಿಯನನು ಓರಂತೆ ನೀ ಪೋಗಿ ಕರೆತಾರೆನ್ನಯ ಪ್ರಾಣಾಧಾರ ಕೇಶವ ಮೂರ್ತಿಯ ನಗ ವೈರಿಯಣುಗನಣ್ಣನಯ್ಯನಾಪ್ತಗೆ ಮಿಗೆ ಹುಟ್ಟಿದನ ತಮ್ಮನ ಸೊಗಸು ವಸ್ತ್ರಕೆ ಸೋತನ ಸುರಪುತ್ರನ ವಾಜಿಯನಿವ ವೈರಿಯ ಪಗೆಯ ಜಗದೊಳಗೆ ಹಾಟಿದೊಳೇರಾಟದ ವನವ... ನವನಿಂದ ನಗೆತೋರಿನಾವುನಿನಗೆ ಅಗಣಿತಾಭರಣವೀವೆನು ಅಂಗಜಾಗ್ನಿಯ ತಗಹ ಬಿಡಿಸೆ ತರುಣಿ ಮಿಹಿರ ನಂದನನ ತಂದೆಯ ಪಗೆಯವನ ಮಾವನ ಹಿತನ ಮನೆವೆಸರ ಮಹಿ ವನ ಕೃತಿಗೊಡೆಯನ ಬ೦ಟನನುಜನ ಸಹಿಸಿ ತಮ್ಮನ ಮಿತ್ರನ ಕುಹಕದಿ ಶಾಪವಡೆದಳು ಪ್ರಸ್ತರವಾಗಿ ಗಗನ ಮಧ್ಯದೊಳಿರಲು ...ಸಿ ಶಾಪವ ದನುಜ... ಕ್ಲಿತಿಯೊಳು ವಿವರಿಸುವವನ ಕರೆತಾರೆ ಸುರಭೇದ ಪ್ರಥಮ ದಾಸಿಯ ಪೆಸರನ ವಾಜಿಯರಸನ ನಖವೈರಿಯ ಮರೆಯ ಮಾರ್ಗದಿ ಗಮಿಸುವನಾಪ್ತನ ತಾಯ ಧರಿಸಿದಾತನ ಮಿತ್ರನ ಪೊರೆಯ ದೆಸೆಯ ದಿಕ್ಕರಿಯ ಕೋಪದಿ ಸೀಳ್ದನರಸಿಯಣ್ಣನನೀಕ್ಷಣ ಕರೆತಂದೆನಗೆ ಕೂಡಿಸು ಕಾಗಿನೆಲೆಯಾದಿಕೇಶವನ