ಕೀರ್ತನೆ - 275     
 
ರಂಗ ಬಾರೋ ರಂಗಯ್ಯ ಬಾರೋ - ನೀ ಬಾರದಿದ್ದರೆ ಎನ್ನ ಪ್ರಾಣ ಉಳಿಯದು ಅತ್ತಿಗೆ ಮೈದುನ ಬಾರೊ ಅತ್ತೆಯ ಮಗಳ ಗಂಡ ಅತ್ತಿಗೆ ಮೇಲತ್ತಿಗೆ ನಾದಿನಿ ಸೊಸೆಯ ಗಂಡ ಮಾವನ ಅಳಿಯನೆ ಬಾರೊ ಮಾವನ ಬೀಗನ ತನುಜ ಮಾವನ ಮಡದಿಯ ಮಗಳ ತಂಗಿಯ ಗಂಡ ಅಂಬುಧಿ ಶಯನನೆ ಬಾರೊ ಆದಿ ವಸ್ತುವೆ ರಂಗ ಕಂಬದೊಳು ನೆಲಸಿದ ಆದಿಕೇಶವರಾಯ