ಮಂಗಳಾರತಿಯ ಪಾಡಿರೆ ಮಾನಿನಿಯರು
ಅಂಧಕನನುಜನ ಕಂದನ ತಂದೆಯ
ಕೊಂದನ ಶಿರದಲಿ ನಿಂದವನ
ಚಂದದಿ ಪಡೆದವನ ನಂದನೆಯಳ ನಲ
ವಿಂದ ಧರಿಸಿದ ಮುಕುಂದನಿಗೆ
ರಥವನಡರಿ ಸುರ ಪಥದಲಿ ತಿರುಗುವನ
ಸುತನಿಗೆ ಶಾಪವನಿತ್ತವನ
ಖತಿಯನು ತಡೆದನ ಸತಿಯ ಜನನಿ ಸುತನ
ಸತಿಯರನಾಳಿದ ಚತುರನಿಗೆ
ಹರಿಯ ಮಗನ ಶಿರ ತರಿದನ ತಂದೆಯ
ಹಿರಿಯ ಮಗನ ತಂದೆಯ ಪಿತನ
ಭರದಿ ಭುಜಿಸಿದವನ ಶಿರದಲಿ ನಟಿಸಿದ
ವರ ಕಾಗಿನೆಲೆಯಾದಿಕೇಶವಗೆ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಪೌರಾಣಿಕ ವಾವೆವರಸೆಯ ಮುಂಡಿಗೆಗಳು