ಕೀರ್ತನೆ - 270     
 
ಮರೆಯದೆ ನೆನೆ ಚೆನ್ನಯನ ಹರಿನಾರಾಯಣ ಅಚ್ಯುತನ ಮಗಳ ತಾನೆ ಮದುವೆಯಾದವನ ಮಗಳ ಮಗನ ಮೊಮ್ಮಗನ ಮಗಳ ಗಂಡನ ಮೇಲೆ ಮಲಗಿದ ಜಾಣನ ಮಗಳ ಮಾವನಿಗೆ ಮೈದುನನ ತಂದೆಗೆ ತಾನೆ ತಂದೆಯಾದವನ ತಂದೆಗೆ ತಾಯಿಯ ತಂದವನ ತಂದೆಗೆ ಪೂರ್ವದಿ ತಾ ಪುಟ್ಟಿಹನ ತಂದೆಗೆ ತಂದೆಗೆ ತಂದೆಯಹನ ರಾಮನ ಸಮರೋದ್ಧಾಮನ ಸುಗುಣಾಭಿ ರಾಮನ ಸೀತಾನಾಯಕನ ರಾಮನ ಪೆತ್ತನ ಕಮಲದಳಾಕ್ಷನ ಪ್ರೇಮದಿ ನೆಲೆಯಾದಿಕೇಶವನ