ಭವ ಭಯ ವಿನಾಶ ಭೋ ಭಕ್ತವಿಲಾಸ ಭೋ ಪಾ-
ಪವಿನಾಶ ಭೋ ಬಾಡದ ರಂಗೇಶ ಭೋ
ಹರಿಯ ಸುತನಿಗೆ ಅಭಯವನಿತ್ತೆ
ಹರಿಯ ಮಗನಾ ಕೊಂದೆ
ಹರಿಯೆನಲು ಹರಿರೂಪ ತಾಳಿದೆ
ಹರಿಯೊಳಡಗಿದೆ ಮತ್ತೆ
ಹರಿಯನಗ್ರಜ ಕೋಟಿ ತೇಜನ
ಹರಿಯ ವದನನೆಂಬ
ಶಿವನ ಮಗಳೊಡಗೂಡಿ ಮತ್ತೆ
ಶಿವಮಗಳನು ಮಾವನಿಗಿತ್ತ
ಶಿವನ ಉಪಟಳಕಳುಕಿ ಗೋಕುಲ
ಶಿವನ ಕರದಲಿ ಪೊತ್ತೆ
ಶಿವನ ಧನುವನು ಖಂಡಿಸಿ ಮತ್ತೆ
ಶಿವನ ತಲೆಯೇರಿ ನಿಂದೆ
ಶಿವನ ಭೋಜನವಾಹನ ಸುತನಿಗೆ
ಶಿವನ ಪ್ರತಿಪಾಲನೆಂಬ
ಕಮಲವನು ಈರಡಿಯ ಮಾಡಿದೆ
ಕಮಲ ಮೊರೆಯಿಡಲಂದು
ಕಮಲದಲಿ ಬ್ರಹ್ಮಾಂಡ ತೋರಿದೆ
ಕಮಲಧರ ನೀನೆಂದು
ಕಮಲವನು ಕದ್ದೊಯ್ದ ಕಳ್ಳನ ಸದೆದು
ಕಮಲವ ತಂದೆ
ಕಮಲಮುಖಿಯಳ ಕಾಯ್ದ ಕಾಗಿನೆಲೆ
ವಿಮಲ ಆದಿಕೇಶವನೆಂಬ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಪೌರಾಣಿಕ ವಾವೆವರಸೆಯ ಮುಂಡಿಗೆಗಳು