ಬಾರೊ ನಮ್ಮ ಮನೆತನಕ ಕಾವೇರಿ ರಂಗ
ಬಾರದಿದ್ದರೆ ಎನ್ನ ಪ್ರಾಣ ಉಳಿಯದೊ ರಂಗ
ಅತ್ತಿಗೆಯ ಮೈದುನ ಬಾರೋ ಹೆತ್ತಮಗಳ ಗಂಡ
ಅತ್ತಿಗೆ ಮೇಲತ್ತಿಗೆ ಮೊಮ್ಮಗಳ ಮುದ್ದಾಡುತ
ಭಾವ ಮೆ )ದುನ ಬಾರೊ ಮಾವ ಬೀಗನ ಅನುಜ
ಮಾವನ ಮಡದಿಯ ಸೊಸೆಯ ಮಗಳ ಗಂಡ
ಅ೦ಬುಜನಯ್ಯನೆ ಬಾರೊ ಆದಿಮೂರುತಿ ರಂಗ
ಕಂಬದೊಳೊಡೆದು ಮೂಡಿದ ಆದಿಕೇಶವ ರಂಗ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಪೌರಾಣಿಕ ವಾವೆವರಸೆಯ ಮುಂಡಿಗೆಗಳು