ಕೀರ್ತನೆ - 263     
 
ನಾರಾಯಣ ಎನ್ನಿ ನಾರದ ವರದನ ನಾರಾಯಣ ಎನ್ನಿರೊ - ವೇದ ಪಾರಾಯಣನಾಗಿ ಕರಿಯ ಕಾಯ್ದಾತನ ನಾರಾಯಣ ಎನ್ನಿರೊ ಶಿವನೊಳು ಕೂಡಿಯೆ ಶಿವವರ್ಣನಾದನ ನಾರಾಯಣ ಎನ್ನಿರೊ ಶಿವನ ತುರುಬಿನೊಳು ಶಿವನ ಕಟ್ಟಿಸಿದನ ನಾರಾಯಣ ಎನ್ನಿರೊ ಶಿವನ ಹರಿಯ ಮಾಡಿದವನ ಸೊಸೆಯ ತಂದನ ನಾರಾಯಣ ಎನ್ನಿರೊ ಶಿವ ದರುಶನವಾಗಿ ಶಿವನು ತಾನಾದನ ನಾರಾಯಣ ಎನ್ನಿರೊ ಗರುಡವಾಹನನಾಗಿ ಗಜವನು ಸಲಹಿದನ ನಾರಾಯಣ ಎನ್ನಿರೊ ಗರುಡನ ಗರಿಯೊಳು ಕಡಲ ತಂದಾತನ ನಾರಾಯಣ ಎನ್ನಿರೊ ಗರುಡನ ಮಾತೆಯಣ್ಣನ ಮುಖಪಡೆದನ ನಾರಾಯಣ ಎನ್ನಿರೊ ಗರುಡ ಗಂಧರ್ವ ನಗರಿಯ ಮೆರೆದಾತನ ನಾರಾಯಣ ಎನ್ನಿರೊ ಸ್ವರ್ಣವಾಹನನಾಗಿ ಕರ್ಣಕುಂಡಲವಿಟ್ಟನ ನಾರಾಯಣ ಎನ್ನಿರೊ ಸ್ವರ್ಣಪಂಕದೊಳು ಶಿವನಪ್ಪಿಕೊಂಡನ ನಾರಾಯಣ ಎನ್ನಿರೊ ಸ್ವರ್ಣ ಖಚಿತವಾದ ರಥದೊಳು ಪೊಕ್ಕನ ನಾರಾಯಣ ಎನ್ನಿರೊ ನಿರ್ಣಯವಿದು ಕಾಗಿನೆಲೆಯಾದಿಕೇಶವನ ನಾರಾಯಣ ಎನ್ನಿರೊ