ಕೀರ್ತನೆ - 261     
 
ಕೇಶವ ಎನ್ನಿರೊ ಕ್ಲೇಶನಾಶನನ - ತನ್ನ ಆಸೆಪಟ್ಟವರಿಗೆ ಅಧಿಕ ಫಲವೀವನ ಸತಿಯ ತಮ್ಮನ ಸುತನೊಳು ಸೋದರನಾದನ _ ಕೇಶವ ಎನ್ನಿರೊ ಮತಿವ೦ತ ಮಾವನ ಮಗಳ ತಂದಾತನ - ಕೇಶವ ಎನ್ನಿರೊ ಮತ ಪಿಡಿದ ಮಾತೆಯ ಮೊಮ್ಮಗನ ಕೊಂದನ - ಕೇಶವ ಎನ್ನಿರೊ ಕ್ಷಿತಿಯುತನಾಗಿ ಕರಿಯ ಕಾಯ್ದಾತನ - ಕೇಶವ ಎನ್ನಿರೊ ದಶಮುಖನರಸಿಯ ಪೆಸರ ಶಿರವಗೆದ್ದನ _ ಕೇಶವ ಎನ್ನಿರೊ ಅಸದಳರೆನಿಪ ರನ್ನರೊಡಗೂಡಿದಾತನ - ಕೇಶವ ಎನ್ನಿರೊ ಕುಸುಮ ಕೋದಂಡ ಗಂಡರ ಗಂಡನಾದನ - ಕೇಶವ ಎನ್ನಿರೊ ಎಸೆವ ಬಾಣಕೆ ತನ್ನ ಎದೆಯಾಂತು ನಿಂತನ - ಕೇಶವ ಎನ್ನಿರೊ ದಾಸರ ಹೃದಯದೊಳಗೆ ನೆಲಸಿಪ್ಪನ _ ಕೇಶವ ಎನ್ನಿರೊ ದೇಶವರಿಕೆಯಲ್ಲಿ ನಯನ ಉಂಟಾದವನ - ಕೇಶವ ಎನ್ನಿರೊ ಮೋಸದಿ೦ ಮುಂದಲೆ ಪಿಡಿದು ಭಂಗಿಸಿದವನ _ ಕೇಶವ ಎನ್ನಿರೊ ದೇಶಾಧಿಪತಿ ಕಾಗಿನೆಲೆಯಾದಿಕೇಶವನ - ಕೇಶವ ಎನ್ನಿರೊ