ಕೀರ್ತನೆ - 254     
 
ಇಂದು ನೀ ಕರೆದು ತಾರೆ - ಬಾರದೆ ಶ್ರೀಗೋ- ಎಂದ ತಾ ಮುನಿದಿಹರೆ - ವಿರಹ ಬೇಗೆಯಲಿ ಬೆಂದು ಸೈರಿಸಲಾರೆ - ಸಖಿ, ನೀನು ತಂದು ತೋರೆ ನೊಂದರೂ ಮನದಾನಂದದಿಂದ ನಂದನಂದನನೆಂದು ಸರಿಸಿ ಎಂದಿಗೂ ಅಗಲಿರಲಾರೆ ಕರೆತಂದು ಹೊಂದುಗೂಡಿಸೆ ಮಂದಗಮನೆ ಕಾಲಿಲ್ಲದಲೆ ಆಡಿದ - ವೇದ ತಂದಿತ್ತ ಕಾಲಿಲ್ಲದವನ ಪೊತ್ತ - ಅಮೃತ ತಂದಿತ್ತ ಕಾಲ ತೂಗಿ ನೋಡುತ್ತ - ಗಜ ಉನ್ಮತ್ತ ಕಾಲಿನಿಂದಲಿ ಕೊಲುವ ರೂಪದಿ ಕಾಲಿನಲಿ ರಿಪುವನು ಸೀಳಿದ ಕಾಲಿನಲಿ ತಾನಳೆದ ಮೇದಿನಿ ಕಾಲಿನಲಿ ನಡೆದ ಭಾರ್ಗವ ಕಾಲಿನಲಿ ವನವಾಸ ಪೋದನ ಕಾಲಿನಲಿ ಕಾಳಿಯನ ಮರ್ದಿಸಿದನ ಕಾಲಿನಲಿ ತ್ರಿಪುರರ ಗೆಲಿದನ ಕಾಲಿಗೆರಗುವೆ ತೇಜಿರೂಢನ ಎವೆಯಿಕ್ಕದೆ ನೋಡಿದ - ತಲೆಯ ತಗ್ಗಿಸಿ ಕವಲು ಕೋರೆದಾಡೆಯೊಳಾಡಿದ - ಕಂಬದಿ ಮೂಡಿದ ತವಕದಿಂದಲಿ ಬೇಡಿದ - ಭೂಭುಜರ ಕಡಿದ ಶಿವನ ಬಿಲ್ಲನು ಮುರಿದ _ ದೇವಕಿ ಕುವರ ನಗ್ನ ಹಯವನೇರಿದ ವಿವಿಧಾಬ್ಧಿಯೂಳಾಡಿ ಗಿರಿಧರ ಸವಿದು ಬೇರನು ಬಾಲಗೊಲಿದನ ಅವನಿ ಬೇಡಿ ಕೊಡಲಿ ಪಿಡಿದನ ಸವರಿ ದಶಶಿರನ ಬೆಣ್ಣೆ ಕದ್ದನ ಯುವತಿಯರ ವ್ರತಗೆಡಿಸಿ ಕುದುರೆಯ ಹವಣುಗತಿಯಲಿ ಏರಿದಾತನ ವರ ಮತ್ಸ್ಯ ನಗಧರನ - ಸೂಕರ ಸಿಂಹನ ತಿರುಕ ತಾಯ್ತರಿದನ - ವರವಿತ್ತು ಶಬರಿಗೆ ತುರುಗಾಯ್ದ ನಿರ್ವಾಣನ - ಅಶ್ವಾರೂಢನ ಊರಿಲ್ಲದೆ ಹೊರೆ ಹೊತ್ತನ ಮುರುಢ ಕ್ರೂರನ ಉರವ ಸೀಳಿದ ವಿಪ್ರ ನೃಪರರಿ ಧರಣಿಜೆಯ ವರ ಕೃಷ್ಣ ಗಗನದಿ ಪುರವ ದಹಿಸಿದ ತೇಜಿರೂಢನ ಮೆರೆವ ಜಲಜ ಕೂರ್ಮ ವರಹ ನರಹರಿ ದ್ವಿಜ ಕೊರಳ ಕೊಯ್ದವನ ನೆಲಮಗಳ ವರ ಶೌರಿ ಬುದ್ಧನ ತುರಗವೇರಿದ ಆದಿಕೇಶವನ