ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದು
ಏಕಂಜುವಿ, ಶ್ರೀಹರಿ ಕರುಣಿಸದೆ ಒಂದೂ ಆಗದು
ಸುಖವಾದಡೆ ಕಾಣುತ ಮುಖ ಕಮಲವು
ವಿಕಸಿತವಾಹುದು ಶ್ರೀಹರಿ ಕರುಣದಿ
ದುಃಖವಾದಡೆ ದುಸ್ಥಿತಿಯಲಿರಲು ಅ೦-
ಬಕದಲಿ ಜಲ ಪೋಗುವುದೇಕೊ?
ಸುಖದುಃಖ ದಿವ ರಾತ್ರಿಯ ತೆರವದರಿ೦ದಲಿ ನರರಂ
ಗಕೆ ಬಾಹುದು, ರಕ್ಷಣೆ ಮಾಡುವ ಕಾಶಿಪೀತಾ೦ಬರ
ಮಕರ ಕುಂಡಲಾಭರಣನ ನೆನೆ ಮನವೆ
ಸಿರಿ ಬಂದರೆ ಸಿರಿಗಾನಂದವ ಮಾಡು
ವಿರೇತಕೆ ಮನ ನಿರ್ಮಳ ದನಿಯಲಿ
ದರಿದ್ರವು ಬಂದರೆ ಧಾತುಗೆಟ್ಟು ದೇಹಾ
ತುರ ಹೊಂದುವಿರೇತಕೆ ದುಗುಡದಿ
ಸಿರಿ ದಾರಿದ್ರ್ಯವು ಸುರತತಿಗಡರುವ
ತೆರನೆಂದರಿದದರಿ೦ದಲಿ ಮಾನ-
ವರಿಗೆ ಬಾಹುದು, ಪರಿಹರಿಸುವ ಪರಮಾತ್ಮನೆನಿಪ
ಮುರವೈರಿಯ ಬಿಡದಿರು ಎಲೆ ಮನವೆ
ಜನನವಾದರೆ ಹಾಡಿ ಹರಸಲೇತಕೆ
ಅನುಗತಿಯನು ಹೇಳಿದರಳಲೇಕೆ
ಜನನಮರಣವದೆಲ್ಲರಿಗೆ ಗತಿಬಾಹುದು ಏಕೆ
ಜನನ ಮರಣವನೊಂದು ಹೊರಗೆ ಮಾಡಿ ಪರ
ಜನದೊಳಗಿರಿಸುವ ಸುಜನೇಶ ಮುನೀಶನೆಂ-
ದೆನಿಸುವ ಕಾಗಿನೆಲೆಯಾದಿಕೇಶವರಾಯನ
ಅನುಶ್ರುತಿಯನು ಬಿಡದಿರು ಎಲೆ ಮನವೆ
Music
Courtesy:
ಸ್ಥಲ -
ವಿಷಯ -
ತಾತ್ತ್ವಿಕತೆ