ಒಲ್ಲೆನೆಂದರಾಗುವುದೆ ಅಲ್ಲಿ ಪಡೆದು ಬಂದುದನು
ಎಲ್ಲವನುಂಡು ತೀರಿಸಬೇಕು ಹರಿಯೆ
ತಂದೆತಾಯಿ ಬಸಿರಿ೦ದ ಬ೦ದ ದಿನ ಮೊದಲಾಗಿ
ಒ೦ದಿಷ್ಟು ಸುಖವನೆ ಕಾಣೆ ನಾ ಹರಿಯೆ
ಬಂದುದನೆಲ್ಲವನುಂಡು ತೀಠಿಸದೆ ಭ್ರಮೆ
ಗೊಂಡ ಮೇಲೇನುಂಟು ಹಗೆಯ ಜೀವನವೆ
ಎಮ್ಮರ್ಥ ಎಮ್ಮ ಮನೆ ಎಮ್ಮ ಮಕ್ಕಳು ಎಂಬ
ಹೆಮ್ಮೆ ನಿನಗೇತಕೊ ವ್ಯರ್ಥ ಜೀವನವೆ
ಬ್ರಹ್ಮ ಪಣೆಯೊಳು ಬರೆದ ವಿಧಿಯು ತಪ್ಪುವುದುಂಟೆ
ಸುಮ್ಮನೆ ಇರು ಕಂಡ್ಯ ಹಗೆಯ ಜೀವನವೆ
ಅಂತರಂಗದಲೊಂದು ಅರ್ಥ ದೇಹದಲೊಂದು
ಚಿಂತೆಯಾತಕೆ ನಿನಗೆ ಪಂಚರೆದುರು
ಕಂತುಪಿತ ಕಾಗಿನೆಲೆಯಾದಿಕೇಶವರಾಯ
ಅಂತರಂಗದಿ ನೆಲೆಗೊಳುವ ತನಕ
Music
Courtesy:
ಸ್ಥಲ -
ವಿಷಯ -
ತಾತ್ತ್ವಿಕತೆ