ಕೀರ್ತನೆ - 243     
 
ರಾಮ ಗೋವಿಂದ ಹರೇ ಕೃಷ್ಣ ಗೋವಿಂದ ದಾಮೋದರ ಹರಿ ಎಷ್ಟು ಮುಕುಂದ ಮಚ್ಛವತಾರದೊಳಾಡಿದನೆ - ಮಂದ ರಾಚಲ ಬೆನ್ನೊಳಾ೦ತವನೆ ಅಚ್ಛ ಸೂಕರನಾಗಿ ಬಾಳಿದನೆ - ಮದ ಹೆಚ್ಚಿ ಹಿರಣ್ಯಕನ ಸೀಳಿದನೆ ಬಲಿಯೊಳು ದಾನವ ಬೇಡಿದನೆ - ಕ್ಷಾತ್ರ ಕುಲವ ಬಿಡದೆ ಕ್ಷಯ ಮಾಡಿದನೆ ಜಲನಿಧಿಗೆ ಬಿಲ್ಲ ಹೂಡಿದನೆ - ಕಾಮ ಗೊಲಿದು ಗೊಲ್ಲತಿಯೊಳಾಡಿದನೆ ಸಾಧಿಸಿ ತ್ರಿಪರರ ಗೆಲಿದವನೆ - ಪ್ರತಿ ವಾದಿಸಿ ಹಯವೇರಿ ನಲಿದವನೆ ಭೇದಿಸಿ ವಿಶ್ವವ ಗೆಲಿದವನೆ - ಬಾಡ ದಾದಿಕೇಶವರಾಯ ನಮಗೊಲಿದವನೆ