ಮಂಗಳಂ ಸರ್ವಜೀವ ರಕ್ಷಕಗೆ
ಮಂಗಳಂ ಅಂಬುಜದಳಾಕ್ಷಗೆ
ಜಲಪ ಒಮ್ಮೆಗೆ ತಂದವಗೆ ಮಂಗಳಂ
ಕುಲಗಿರಿಯನು ಕಾಯ್ದವಗೆ ಮಂಗಳಂ
ನೆಲನ ಕದ್ದ ಚೋರನ ಗೆಲಿದಗೆ ಮಂಗಳಂ
ಸುಲಭ ನರಸಿಂಹನಿಗೆ ಶುಭ ಮಂಗಳಂ
ವಸುಧೆ ಈರಡಿ ಗೈದವಗೆ ಮಂಗಳಂ
ವಸುಧೇಶ ಕುಲವನಳಿದಗೆ ಮಂಗಳಂ
ದಶಕಂಧರನನು ಗೆಲಿದಗೆ ಮಂಗಳಂ
ಪಶುಗಳ ಕಾಯ್ದವಗೆ ಮಂಗಳಂ
ಪುರತ್ರಯ ವಧು ವ್ರತವಳಿದಗೆ ಮಂಗಳಂ
ತುರಗ ವಾಹನನಿಗೆ ಮಂಗಳಂ
ಗರುಡ ವಾಹನ ವಾರಿಧಿ ಶಯನ
ವರ ಕಾಗಿನೆಲೆಯಾದಿಕೇಶವಗೆ ಮಂಗಳಂ
Music
Courtesy:
ಸ್ಥಲ -
ವಿಷಯ -
ದಶಾವತಾರದ ಲೀಲೆಗಳು