ಕೀರ್ತನೆ - 237     
 
ಪರಮ ಪುರುಷ ಹರಿ ಗೋವಿಂದ ಸಿರಿ ಪರ ನಾರಾಯಣ ಗೋವಿಂದ ನಿಶೆವಸರಸುರನ ಉಸಿರ ತೊಲಗಿಸಿದೆ ಕುಸುಮ ಶರನ ಪಿತ ಗೋವಿಂದ ವಸು ಪೂರಿತ ಶ್ರುತಿ ಮಸುಳಿಸದೆ ತಂದೆ ಬಿಸಜ ಸಂಭವನಯ್ಯ ಗೋವಿಂದ ಜತನದಿ ಮಧುಮಥನದಿ ಮಂದರ ಪರು ವತ ಉದ್ದರಿಸಿದೆ ಗೋವಿಂದ ಶತ ಕ್ರತುವಿನ ಸಿರಿ ಗತವಾಗದ ಮುನ್ನ ಕ್ಷಿತಿ ಪೆತ್ತನಯ್ಯ ಗೋವಿಂದ ಭೂತಳವೆರಸಿ ರಸಾತಳಕಿಳಿದಿಹ ಪಾತಕನ ಕಂಡೆ ಗೋವಿಂದ ಆತನೊಡನೆ ಕಾದಾತನ ಗೆಲಿದು ಮ- ಹೀತಳವನು ತಂದೆ ಗೋವಿಂದ ದುರುಳಾಸುರನ ನಡುಗರುಳ ಮಾಲೆ ಮುಂ- ಗೊರಳೊಳು ಧರಿಸಿದೆ ಗೋವಿಂದ ಗರಳ ಕೊರಳನು ಬೆರಳೆತ್ತಿ ಪೊಗಳಲು ತರಳಗೊಲಿದೆ ನೀ ಗೋವಿಂದ ವಾಮನನಾಗಿ ನಿಸ್ಸೀಮ ಬಲಿಯ ಕೈಯ ಭೂಮಿಯನಳೆಕೊಂಡೆ ಗೋವಿಂದ ತಾಮರಸ ಪದದಿ ಕನಕ ಗರ್ಭಯೋಗ ವ್ಯೋಮ ಗಂಗೆಯ ತಂದೆ ಗೋವಿಂದ ಸುರ ಪಶುವಿಗೆ ಋಷಿಯನು ಕೊಂದನ ಬಹು ಕರ ಬಲ ಮುರಿದೆಯೊ ಗೋವಿಂದ ತರ ಹರಿಸದೆ ವಸುಧೆಯ ಒಡೆತನ ಭೂ ಸುರರಿಗೆ ನೀಡಿದೆ ಗೋವಿಂದ ತ್ರಿಣಯನ ತಾತ್ಪರ್ಯ ರಾವಣನ ಶಿರ ರಣದೊಳುರುಳಿಸಿದ ಗೋವಿಂದ ಕ್ಷಣಮೆಣಿಸದೆ ಸದ್ಗುಣವಂತ ವಿಭೀ- ಷಣಗಭಯವಿತ್ತೆ ಗೋವಿಂದ ಮಾರಣ ಕ್ರತು ಸಂಪೂರಣ ಕಂಸ ಸಂ- ಹಾರಣ ಭುಜಬಲ ಗೋವಿಂದ ವಾರಣಪುರಪತಿ ಸಿರಿ ಭೂಭಾರೋ ತ್ತಾರಣ ಬಲಯುತ ಗೋವಿಂದ ಕಥೆಯನು ನಿರ್ಮಿಸಿ ಪತಿವ್ರತೆಯರ ಘನ ವ್ರತಗಳ ಕೆಡಿಸಿದೆ ಗೋವಿಂದ ಜತೆಯಗಲದ ಪುರ ತ್ರಿತಯ ಗೆಲಿದು ದೇ- ವತೆಗಳ ಸಲಹಿದೆ ಗೋವಿಂದ ಜಾಜಿಯ ಮರಕತ ತೇಜಿಯನೇರಿ ವಿ- ರಾಜಿಪ ರಾವುತ ಗೋವಿಂದ ಸೂಜಿಯ ಬೆನ್ನೊಳು ರಾಜಿಪ ತೆರದಿ ಸ- ಹಜರೊಳಡಗಿರ್ಪ ಗೋವಿಂದ ಮೇದಿನಿಗೋಸುಗ ಕಾದಿ ಕಲಹದಿ ವಿ- ರೋಧಿಗಳ ಕೊಂದೆ ಗೋವಿಂದ ಸಾಧುಗಳಿಗೆ ಸುಖವೀಯುವ ಬಾಡದ ಶ್ರೀಧರ ಕೇಶವ ಗೋವಿಂದ