ಕೀರ್ತನೆ - 234     
 
ನಾರಾಯಣನೆ ಈತ - ನಾರಿ ಒಳ್ಳೆಯ ವರಿಗೆ ಮಾಡ್ಬ ವಿಘಾತ ಪರಿಪರಿಯಲಿ ಪೊಗಳುವ ಗೀತ - ನಾನೆಂದ ವರ ಮುರಿದ ಪ್ರಖ್ಯಾತ ಕೈಕಾಲಿಲ್ಲದೆ ಆಡ್ದಾ ಮೈಮೇಲ್ಭಾರವ ಪೊತ್ತು ನೋಡ್ದಾ ಕೋರೆಯಲಿ ತಿವಿದು ಹತ ಮಾಡ್ದಾ ತಾಕೊ ಎಂದು ಒದರಿ ಬಗೆದು ಬೀರ್ದಾ ಅರ್ತಿಯಿ೦ದ ಪಾತಾಳಕೆ ದೂಡ್ದಾ ಮುನಿಯ ಮಗನಾಗಿ ಕ್ಷತ್ರಿಯರ ಕಾಡ್ದಾ ರಾವಣಗಾಗಿ ಅಂಬುತೆಗೆದು ಹೂಡ್ದಾ ಆ ಜಮುನೆ ಪೊಕ್ಕು ಮೋಜು ಮಾಡ್ದಾ ದಿಗಂಬರ ವೇಷವ ತಾಳ್ಜಾ ದಿಗಿದಿಗಿ ಎಂದು ಅಶ್ವವೇರ್ದಾ ಕಳ್ಳಗಿಂತ ಮಹಾಕಳ್ಳ ಕಲ್ಲನು ಮರೆ ಮಾಡಿಕೊಂಡಿಹನಲ್ಲ ಭೂಮಿ ನೆಗಹುದ ಬಲ್ಲ ಪುಟ್ಟ ಮಗು ಪ್ರಹ್ಲಾದಗೊಲಿದನಲ್ಲ ಎರಡು ಪಾದ ಭೂಮಿ ತಾನೊಲ್ಲ ಇವನ ಕೊಡಲಿಬಾಯಿಗಿದಿರಿಲ್ಲ ಕೋ ಎಂದ ಲಂಕೆಗೆ ಬೆಂಕಿ ಮಲ್ಲ ಕೊಂಕಲಿ ಕೊಳಲನೂದಿ ಗೊಲ್ಲ ಮೈಮೇಲ್‌ ಗೇಣರಿವೆಯಿಲ್ಲ ಇವ ಮೇಲಾದ ತೇಜಿಯನೇರಬಲ್ಲ ಕಣ್ಣಬಿಟ್ಟು ವೈರಿ ನೋಡಿ ಕೊಂದ ಮೋರೆ ಮುದುರಿಕೊಂಡಿಹುದೇನು ಚಂದ ದಾಡೇಲಿ ದೂಡಿ ತಂದ ಕಂಬವನೊಡೆದು ಪೊಡವಿಲಿ ಮೂಡೇನೆಂದ ಶುಕ್ರಗೆ ಕಣ್ಣು ಮಾಡಿದನೊಂದ ಕೋಡಗಗಳ ಕೂಡಿ ವನಕ್ಕೆ ಕೇಡು ತಂದ ಹಾಲ್ಮೊಸರ ಮೀಸಲು ಮುರಿದು ತಿಂದ ಬತ್ತಲೆ ನಿಂದು ಹತ್ತುವೆ ಕುದುರೆ ಎಂದ ಭರದಿ ಕಾಗಿನೆಲೆಯಾದಿಕೇಶವನೆಂದ