ಈತನೇನೆ ನಿನ್ನ ಮಗನು
ಸೀತಾಪತಿ ರಘುನಾಥನೆಂಬವನು
ವ್ಯಾಸನ ಜನನಿಯ ವಾಸನೆ ತಾಳ್ಗನು
ದೇಶದೊಳಗೆ ಬಲು ಪೆಸರುಳ್ಳವನು
ನಾಸದೊಳೊರ್ವನ ಪೊತ್ತು ಮುರಿದು ಮು-
ನೀಶರ ಶಾಪವ ಪಿಡಿದು ಕೊ೦ದಾತನು
ಆನೆವಾಹನ ಪಿತನ ತಾಯನಳೆದೋನು
ಭಾನುಸುತಗೆ ಶಾಪವಿತ್ತವನು
ಕಾನನ ಜನನಿಯ ಕೊಂದು ಪ್ರಿಯದಲಿ ನಿ-
ಧಾನದಿ ಶರಧಿ ಶಯನ ಮಾಡಿದಾತನು
ಮೂಗ್ರಾಮ ಮುರಿದು ವಾಜಿಯನೇರಿದಾತನು
ಸಾಗ್ರದಿಂದಿಳೆಯ ಭಾಗ್ಯ ಹಿಂಗಿಸಿದ
ಯೋಗ್ಯದಿಂದ ಬಳಪತಿತನವನಿಗೆ
ಭಾಗ್ಯವಿತ್ತ ಕಾಗಿನೆಲೆಯಾದಿಕೇಶವ
Music
Courtesy:
ಸ್ಥಲ -
ವಿಷಯ -
ದಶಾವತಾರದ ಲೀಲೆಗಳು