ಕೀರ್ತನೆ - 227     
 
ಅ೦ಬುಜದಳಾಕ್ಷಗೆ ಮಂಗಳ ಸರ್ವ ಜೀವರಕ್ಷಕಗೆ ಮಂಗಳ ಜಲಧಿಯೊಳಾಮ್ನಾಯ ತಂದಗೆ ಮಂಗಳ ಕುಲಗಿರಿ ತಾಳ್ದಗೆ ಜಯಮಂಗಳ ನೆಲನ ಕದ್ದಸುರನ ಗೆಲಿದಗೆ ಮಂಗಳ ಚೆಲುವ ನರಸಿಂಹಗೆ ಶುಭಮಂಗಳ ವಸುಧೆಯ ಈರಡಿಗೈದಗೆ ಮಂಗಳ ವಸುದಾಧಿಪರಳಿದಗೆ ಜಯಮಂಗಳ ದಶಕ೦ಧರನನ್ನು ಗೆಲಿದಗೆ ಮಂಗಳ ಪಶುಗಳ ಕಾಯ್ದಗೆ ಶುಭ ಮಂಗಳ ಪುರ ತ್ರಯ ವಧುಗಳ ಗೆಲಿದಗೆ ಮಂಗಳ. ತುರಗ ವಾಹನನಿಗೆ ಜಯ ಮಂಗಳ ವರ ನೆಲೆಯಾದಿಕೇಶವನಿಗೆ ಮಂಗಳ ಪರಮ ಪತ್ನಿವ್ರತಗೆ ಶುಭ ಮಂಗಳ