ಕೀರ್ತನೆ - 226     
 
ಹಣ್ಣು ಕೊ೦ಬುವ ಬನ್ನಿರಿ - ಹರಿದಾಸರು ಹಣ್ಣು ಕೊಂಬುವ ಬನ್ನಿರಿ ಚೆನ್ನ ಬಾಲಕೃಷ್ಣನೆಂಬ ಕನ್ನೆಗೊನೆ ಬಾಳೆಹಣ್ಣು ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು ಭಕ್ತರ ಬಾಯೊಳು ನೆನೆವ ಹಣ್ಣು ಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆ ನಿತ್ಯ ಮಾಧವನೆಂಬ ಅಚ್ಚ ಮಾವಿನ ಹಣ್ಣು ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು ನಿಜಮುನಿಗಳಿಗೆ ತೋರಿಸಿದ ಹಣ್ಣು ತ್ರಿಜಗವಂದಿತ ಪಾಲ್ಲಡಲೊಡೆಯನ ಹಣ್ಣು ಸುಜನ ಭಕ್ತರೆಲ್ಲ ಕೊಳ್ಳ ಬನ್ನಿರಿ ಹಣ್ಣು ತುರುವ ಕಾಯ್ದ ಹಣ್ಣು ಉರಗನ ತುಳಿದ ಹಣ್ಣು ಕರೆದರೆ ಕಂಬದೊಳು ಓಯೆಂಬ ಹಣ್ಣು ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು ಕರುಣಾಳು ಕಾಗಿನೆಲೆಯಾದಿಕೇಶವ ಹಣ್ಣು