ಮುಟ್ಟದಿರೊ ಎನ್ನನು - ರಂಗಯ್ಯ
ಮುಟ್ಟದಿರೊ ಎನ್ನನು
ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆ
ಮುತ್ತೆಲ್ಲ ಸಡಲ್ಯಾವೊ ಹೇ ಮುದ್ದುರಂಗ
ಅತ್ತೆಯೊಬ್ಬಳ ಕೂಡ ಆಡಿ ಬರುವುದ ಕಂಡೆ
ಸತ್ಯವ ಮಾಡದಿರೊ - ಹೇ ಸರಿನಂಟ
ನೂರೆಂಟ
ಬಣ್ಣದ ಬಂಟ
ಬಿಡು ಎನ್ನ ಗಂಟ
ಹಡೆದವರ ತಲೆಗೆ ಮರಳು ಚೆಲ್ಲಿದಂತೆ
ಮಡದೇರ ಕೂಡ್ಯಾಡಿ ಕಲಿತ್ಯೆಲ್ಲೊ ಮಿರುಗ
ದಿಮ್ಮದಿರುಗ
ಸೊಕ್ಕಿಮುರುಗ
ಬಿಡು ಎನ್ನ ಸೆರಗ
ಅಂಗೈಯ ನೊರೆಹಾಲು ಮುಂಗೈಯ ಮೇಲುಗಡೆ
ಸಿ೦ಗಾರವಾದುದ ಕಂಡೆ ಕಲೆಯ
ಕಾಗಿನೆಲೆಯ
ಬಟ್ಟಮೊಲೆಯ
ಕನಕಯ್ಯನಿಗೊಲೆಯ
Music
Courtesy: