ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ
ವಿಕಟ ಪೂತನಿಯ ಕೊಂದು
ಶಕಟಾಸುರನ ಪಾದದಿ ತುಳಿದು
ಧಿಕಿಟ ಧಿಕಿಟ ಎನ್ನುತಲಿ
ಕುಕಿಲಿರಿದು ಕುಣಿಯುತ ಮನೆಗೆ
ಗೋವರ್ಧನ ಪರ್ವತವನೆತ್ತಿ
ಗೋವುಗಳ ಕಾಯ್ದು ತನ್ನ
ಮಾವ ಕ೦ಸನ ಕೊಂದು
ಕಾವನ ಜನಕ ಪಾಡುತ ಮನೆಗೆ
ಫಾಲನೇತ್ರ ಚಂದಶೇಖರನ
ಸುಲಭದಿಂದ ಬಾಧೆಯ ಬಿಡಿಸಿ
ಪಾಲಿಸುವ ಕರುಣದಿಂದ
ಬೇಲಾಪುರದ ಚೆನ್ನಕೇಶವ
Music
Courtesy: