ಬೀದಿಯೊಳು ಯಾತರಾ ನಂಟು ಬೇಡ ದಮ್ಮಯ್ಯ
ಭೇದಿಸಿ ನೋಡುವರು೦ಟು ಬೆಂಬತ್ತಿ ಬಾರದಿರಯ್ಯ
ಕಂಡ ಕಂಡ ಠಾವಿನಲಿ ಕಣ್ಣೆತ್ತಿ ನೋಡದಿರಯ್ಯ
ಕಂಡಿಯೊಳು ಕೈಸನ್ನೆ ಮಾಡದಿರಯ್ಯ
ಗ೦ಡನುಳ್ಳವಳ ಜೊತೆ ಭಂಡಾಟವ್ಯಾಕಯ್ಯ
ಕೊಂಡೆಗಾತಿಯರುಂಟು ದುಡುಕದಿರಯ್ಯ
ಬೇಳುವೆಯ ಮಾತಾಡಿ ಗಾಳ ಹಾಕದಿರಯ್ಕ
ಬಾಳೆ ಹಣ್ಣಿಗೆ ಕೊಡಲಿ ಬೇಕೆ ದಮ್ಮಯ್ಯ
ಆಳುವ ಅರಸಾಗಿ ನಿನಗಾವ ಬರವಯ್ಯ
ಮೇಳದವರ ಬಿಟ್ಟು ಮೇರೆದಪ್ಪುವರೇನಯ್ಯ
ನೋಡುವರು ಜನರೆಲ್ಲ ನಾಚಿಕೆ ಇಲ್ಲವೇನಯ್ಯ
ಜೋಡು ಕಳಸವ ಹಿಡಿಯದಿರು ಜೋಕೆ ದಮ್ಮಯ್ಯ
ಮಾಡುವ ದೈನ್ಯ ಬಲ್ಲೆ ಮದ್ದೂರು ನರಸಿ೦ಹಯ್ಯ
ಕೂಡಿದ ಕನಕನಾದಿಕೇಶವ ನೀನಹುದಯ್ಯ
Music
Courtesy: