ಬಾಲಕನೆಂದೆತ್ತಿಕೊಂಡೆನೆ - ಗೋಪಾಲಕೃಷ್ಣನ
ಬಾಲಕನೆಂದೆತ್ತಿಕೊಂಡೆನೆ
ಬಾಲಕನೆಂದೆತ್ತಿಕೊಂಡರೆ - ವಾರೆ ಮಾಡಿ ಮೋರೆ ನೋಡಿ
ಶ್ರೀಲತಾಂಗಿಯರ ಲೋಲ - ಮಾರನಾಟವಾಡಿ ಪೋದನೆ
ಹೊತ್ತರೆದ್ದು ಮನೆಗೆ ಬಂದನೆ - ಯಶೋದೆ ಕೇಳೆ
ಎತ್ತಿಕೊಂಡು ಮುತ್ತುಕೊಟ್ಟೆನೆ
ಎತ್ತಿಕೊಂಡು ಮುತ್ತು ಕೊಟ್ಟರೆ
ಮುತ್ತಿನ್ಹಾರ ಕೊರಳಿಗ್ದಾಕಿ
ಚಿತ್ತಜಾತ ಕೇಳಿಯಲ್ಲಿ
ಬತ್ತಲೆ ನಿಂದೆತ್ತು ಎಂದನೆ
ಗಂಡನಂತೆ ಮನೆಗೆ ಬಂದನೆ - ಯಶೋದೆ ಕೇಳೆ
ಮಿಂಡನಂತೆ ಕಣ್ಣು ಹೊಡೆದನೆ
ಪುಂಡಪೋಕರನ್ನು ಮೀರಿ
ದುಂಡು ಕುಚಗಳನ್ನು ಪಿಡಿದು
ದಿಂಡುರುಳಿಸಿ ಒಂದುಸರಲಿ
ಬಂಡನುಂಡು ಹಾರಿ ಹೋದನೆ
ಏಸು ಮೋಸ ಕಲಿತ ಜಾಣನೆ - ಯಶೋದೆ ಕೇಳೆ
ವಾಸುದೇವ ಮಾಯಕಾರನೆ
ಹಾಸುಮಂಚದ ಹಾಸುಗೆಯಲಿ
ತೋಷದಿಂದ ಬಾಚಿ ಸೆಳೆದು
ಶೇಷನನ್ನು ಪೂಜಿಸೆಂದ
ಶ್ರೀಶ ಬಾಡದಾದಿ ಕೇಶವ
Music
Courtesy: