ಕೀರ್ತನೆ - 216     
 
ಗೊಲ್ಲರಾ ಮನೆಯ ಪೊಕ್ಕು ಗುಲ್ಲು ಮಾಡುವುದೇನಲ -ಬಲು ಲಲ್ಲೆ ಮಾಡುವುದೇನಲ ಹಾಲು ಮೊಸರು ಫೃತವು ನೆಲುವಿನ ಮೇಲೆ ಇಟ್ಟ ಬೆಣ್ಣೆಯ ಬಾಲಕರಿಗಿಲ್ಲದಲೆ ಸುರಿದು ಹಾಲುಗಡಿಗೆಯನೊಡೆದಲ ಸಣ್ಣ ಮಕ್ಕಳ ಕಣ್ಣ ಮುಚ್ಚಿ ಹುಣ್ಣಿಮೆ ಬೆಳುದಿಂಗಳಲಿ ಬಣ್ಣ ಬಣ್ಣದ ಮಾತನಾಡಿ ಸಣ್ಣ ಕೆಲಸಕ್ಕೆಳೆದಲ ಸುದತಿಯೊಬ್ಬಳು ದಧಿಯ ಮಧಿಸುತ ಒದಗಿದ ಬೆಣ್ಣೆಯ ತೆಗೆಯಲು ಮದನ ಕದನಕೆ ಕೆಡಹಿ ಮಾನಿನಿ ಒದರಿದರು ನೀ ಬಿಡೆಯಲ ಕಿಟ್ಟ ನಾ ನಿನಗೆಷ್ಟು ಹೇಳಲಿ ದುಷ್ಟ ಬುದ್ದಿಯ ಬಿಡೆಯಲ ಇಷ್ಟು ಹರಳಿಸಿ ರಟ್ಟು ಯಾತಕೆ ಬಿಟ್ಟು ಮಧುರೆಗೆ ಪೋಗೆಲ ಕೇಶವ ವಿಠ್ಠಲ ನಿನ್ನನು ಕೂಸು ಅಂದವರ್ಯಾರಲೊ - ಹಸು ಗೂಸು ಅ೦ದವರ್ಯಾರಲೊ ದೇಶದೊಳಗೆ ವಾಸವಾಗಿಹ ಬೇಲೂರು ಚೆನ್ನಕೇಶವ