ಕೀರ್ತನೆ - 211     
 
ಆನೆಯ ನೋಡಿರಯ್ಯ ನೀವೆಲ್ಲರು ಆನಂದ ಪಡೆಯಿರಯ್ಯ ತಾನು ತನ್ನವರೆಂಬ ಮಾನವರ ಸಲಹಿದ ಪಾಂಡು ಚಕ್ರೇಶನ ಸುತರಿಗೊಲಿದಾನೆ ಗಂಡುಗಲಿ ಮಾಗಧನ ಒರಸಿದಾನೆ ಹಿಂಡು ಗೋವಳರೊಳಗೆ ಹಿರಿಯನ ಕಳೆಯದಾನೆ ಲಂಡರಿಗೆ ಎದೆಗೊಡುವ ಪುಂಡಾನೆ ಬಾಲಕನ ನುಡಿಗೇಳಿ ಖಳನ ಸೀಳಿದಾನೆ ಪಾಲುಂಡು ವಿದುರನ ಸಲಹಿದಾನೆ ಲೋಲಾಕ್ಷಿ ಮಾನಭಂಗಕ್ಕೊದಗಿದಾನೆ ಖೂಳ ಶಿಶುಪಾಲನನು ಸೀಳಿದಾನೆ ಅಜಮಿಳನಿಗೆ ನಿಜಪದವಿಯ ಕೊಟ್ಟಾನೆ ಕುಜನರೆಲ್ಲರನು ಒರಗಿಸಿದಾ ಅಜಪಿತ ಕಾಗಿನೆಲೆಯಾದಿಕೇಶವಾನೆ ತ್ರಿಜಗವಲ್ಲಭ ತಾನು ಭಜಕರ ವಶವಾನೆ