ಕೀರ್ತನೆ - 210     
 
ಆನೆ ಬಂದಿದೆ ಇದಿಗೊ ಮದ್ದಾನೆ ಜ್ಞಾನಿಗಳೊಳಾಡುವ ಮದ್ದಾನೆ ದೇವಕಿಯೊಳು ಪುಟ್ಟಿದಾನೆ - ವಸು ದೇವನ ಪೆಸರೊಳೈತಂದ ಮದ್ದಾನೆ ಶ್ರೀ ವಾಸುದೇವನೆಂಬಾನೆ - ಗೋಪಿ ದೇವಿಯ ಗೃಹದೊಳಾಡುವ ಪುಟ್ಟಾನೆ ನೀಲವರ್ಣದ ನಿಜದಾನೆ - ಸ್ವರ್ಣ ಮಾಲೆಗಳಿಟ್ಟು ಮೆರೆವ ಚಲುವಾನೆ ಶ್ರೀಲೋಲನೆನಿಪ ಪಟ್ಟದಾನೆ - ದುಷ್ಟ ಕಾಲಿಂಗನ ಪೆಡೆಯ ಮೆಟ್ಟಿ ತುಳಿದಾನೆ ಬಾಲೇಂದು ಮುಖದ ಮರಿಯಾನೆ - ಕದ್ದು ಪಾಲನ್ನು ಕುಡಿದ ಮರಿಯಾನೆ ಕೈಲಿ ಗಿರಿಯನೆತ್ತಿದಾನೆ ಕಾಳ್ಗಿಚ್ಚನ್ನು ನುಂಗಿದ ಪಟ್ಟದಾನೆ ಧೇನುಕಾಸುರನ ಕೊಂದಾನೆ ತನಗೆ ಜೋಡಿಲ್ಲದಿಹ ನಿಜದಾನೆ ಮಾನವರಿಗೆಲ್ಲ ಸಿಲ್ಕದಾನೆ ಶೌನಕಾದಿಗಳೊಂದಿಗಿಪ್ಪಾನೆ ಮಲ್ಲರೊಡನೆ ಗೆಲಿದಾನೆ - ಕಡು ಖುಲ್ಲ ಕಂಸನ ಕಡಹಿದಾನೆ - ವಿದ್ಯೆ ಸಾಂದೀಪ ರಲಿ ಕಲಿತ ಮರಿಯಾನೆ ಸಲೆ ಭಕ್ತರ ಕಾವ ಪುಟ್ಟಾನೆ ತರಳೆ ರುಕ್ಮಿಣಿಯ ತಂದಾನೆ - ಬಹು ಕರುಣದಿ೦ ಪಾಂಡವರ ಪೊರೆದಾನೆ ವರ ವೇಲಾಪುರದೊಳಿಪ್ಪಾನೆ ಸಿರಿಯಾದಿಕೇಶವನೆಂಬ ಮದ್ದಾನೆ