ಕೀರ್ತನೆ - 208     
 
ಮಗನಿಂದೆ ಗತಿಯುಂಟೆ ಜಗದೊಳಗೆ ನಿಗಮಾರ್ಥ ತತ್ತ್ವವಿಚಾರದಿ೦ದಲ್ಲದೆ ? ತ್ರಿಗುಣರಹಿತ ಪರಮಾತ್ಮನ ಧ್ಯಾನದಿ ಹಗಲಿರುಳು ನಿತ್ಯಾನಂದದಿಂದ ತೆಗೆದು ಪ್ರಪಂಚವಾಸನೆಯ ಬಿಟ್ಟವರಿಗೆ ಮಗನಿದ್ದರೇನು ಇಲ್ಲದಿದ್ದರೇನು ? ಲಲನೆಯರು ಪುರುಷರು ತಮತಮ್ಮ ಕಾಮದ ಸಲುವಾಗಿ ಕೂಡೆ ಶೋಣಿತ ಶುಕ್ಲದಿ ಮಿಳಿತವಾದ ಪಿಂಡ ತನ್ನ ಪೂರ್ವಕರ್ಮದಿಂದ ನೆಲಕೆ ಬೀಳಲು ಅದು ಸಲಹಿ ರಕ್ಷಿಪುದೆ ? ಪರಮ ದುಷ್ಟನಾಗಿ ಮರೆತು ಸ್ವಧರ್ಮವ ಗುರು ಹಿರಿಯರ ಸಾಧುಗಳ ನಿಂದಿಸಿ ಬೆರೆದನ್ಯ ಜಾತಿಯ ಪರನಾರಿಯ ಕೂಡಿ ಸುರೆ ಕುಡಿದು ಜೂಜಾಡಿ ನರಕಕ್ಕೆ ಬೀಳುವ ಸತ್ಯನೊಬ್ಬ ಮಗ ಶಾ೦ತನೊಬ್ಬ ಮಗ ದು ರ್ವೃತ್ತಿ ನಿಗ್ರಹನೊಬ್ಬ ಸಮಚಿತ್ತನೊಬ್ಬನು ಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆ ಹೆತ್ತರೇನು ಇನ್ನು ಹೆರದಿದ್ದರೇನಯ್ಯ ? ಸುತರಿಲ್ಲದವಗೆ ಸದ್ಗತಿ ಇಲ್ಲವೆಂತೆಂಬ ಕೃತಕ ಶಾಸ್ತ್ರವು ಲೌಕಿಕಭಾವಕೆ ಕ್ಷಿತಯೊಳು ಕಾಗಿನೆಲೆಯಾದಿಕೇಶವ ಜಗ ತ್ಪತಿಯ ಭಜಿಪಗೆ ಸದ್ಗತಿಯಿರದೆ ಹೋಹುದೆ ?