ದಾಸ ಪಟ್ಟವೋ ಸನ್ಯಾಸ ಪಟ್ಟವೋ
ಆಸೆಯಿ೦ದ ನೆಲೆಯಾದಿಕೇಶವನ್ನ ನೆನೆಯದವಗೆ
ಮಂಡೆ ಬೋಳು ಮಾಡಿ ನಾಮ
ದುಂಡೆಯನ್ನು ಬರೆದು ಕೆಡಿಸಿ
ಕಂಡಕ೦ಡವರನು ಕೂಡಿ
ಭಂಡ ಜನ್ಮ ಹೊರೆಯುವವಗೆ
ಅವರಿವರ ಕೈಯ ನೋಡಿ ಹ
ಲವು ಕೆಲವು ಮಾತನಾಡಿ ಹ
ಲವ ಹಂಬಲಿಸಿ ದಿ-
ನವ ಕಳೆದು ಉಳಿದು ಬಾಳುವಗೆ
ಬೆಂದ ಸಂಸಾರವೆಂಬ
ಬ೦ಧನದೊಳಗೆ ಸಿಲುಕಿಕೊಂಡು
ಚೆ೦ದಾದಿಕೇಶವನ್ನ
ಒ೦ದು ಬಾರಿ ನೆನೆಯದವಗೆ