ಕೀರ್ತನೆ - 197     
 
ಸಾರಿ ದೂರಿ ಹೇಳುತೇನೆ ಕೆಟ್ಟ ಕಂಡ್ಯ ಬಡ್ಡಿ ಮನವೆ ದೂರೋ ಬುದ್ದಿ ಮಾಡಬೇಡ ಕೈಯೊಳಿಕೋ ಕಡ್ಡಿ ನಿನ್ನ ಕೈಯೊಳಿಕೋ ಕಡ್ಡಿ ಕೋಪವನ್ನೆ ಮಾಡದಿರು ಪಾಪಕೆ ಗುರಿಯಾಗದಿರು ಶ್ರೀಪತಿಯ ನಾಮವನು ನೀ ಪಠಿಸುತಲಿರು ಮನವೆ ಅಷ್ಟಮದದಿ ಮೆರೆಯದಿರು ನಷ್ಟಕೆ ಗುರಿಯಾಗದಿರು ದುಷ್ಟ ಸಂಗವನ್ನು ಮಾಡಿಭ್ರಷ್ಟನಾಗಬೇಡ ಮನವೆ ಸಿರಿಯ ಮೆಚ್ಚಿ ಮೆರೆಯದಿರು ಬರಿದೆ ಹೊತ್ತ ಕಳೆಯದಿರು ಪರರ ನಿಂದೆಯನ್ನು ಮಾಡಿ ನರಕಿಯಾಗಬೇಡ ಮನವೆ ಕಾಯವನ್ನು ನಂಬದಿರು ಮಾಯಕೆ ಮರುಳಾಗದಿರು ಸ್ತ್ರೀಯರನ್ನು ಕಂಡು ನೀನು ಬಯಸದಿರು ಮರುಳು ಮನವೆ ನಿನ್ನ ನಿಜವ ನಂಬದಿರು ಉನ್ನತಾಸೆ ಮಾಡದಿರು ಚೆನ್ನಾದಿಕೇಶವನ ಪಾದವನ್ನು ನೀನು ನ೦ಬು ಮನವೆ