ಕೀರ್ತನೆ - 194     
 
ಸಜ್ಜನರ ಸಂಗದೊಳಗಿರಿಸೆನ್ನ ರಂಗ ದುರ್ಜನರ ಸಂಗ ನಾನೊಲ್ಲೆ ಮಂಗಳಾಂಗ ಕೂಡಿದ ಸಭೆಯಲಿ ಕುತ್ಸಿತವ ನುಡಿವನ ಸಂಗ ನಾಡಿನೊಳಗನ್ಯಾಯವ ಮಾಡುವನ ಸಂಗ ಬೇಡಿದರು ಕೊಡದಿರುವ ಕಡುಲೋಭಿಯ ಸ೦ಗ ಮೂಢ ಮೂರ್ಖರ ಸಂಗ ಬಲು ಭಂಗ ಎಲೊ ರಂಗ ಗುರು ಸತಿಗೆ ಪರಸತಿಗೆ ಎರಡು ಬಗೆವರ ಸಂಗ ಗುರು ನಿಂದೆ ಪರನಿಂದೆ ಮಾಡುವರ ಸಂಗ ಪರಹಿತಾರ್ಥದ ಧರ್ಮವರಿಯದವರ ಸಂಗ ಮರುಳ ಪಾಮರ ಸಂಗ ಬಲು ಭಂಗ ಎಲೊ ರಂಗ ಆಗಮದ ಅನ್ವಯವನರಿಯದವನ ಸ೦ಗ ರೋಗದಲಿ ಆವಾಗಲು ಮುಲುಗುವನ ಸ೦ಗ ಕಾಗಿನೆಲೆಯಾದಿಕೇಶವನಂಘ್ರಿ ನೆನೆಯದಿಹ ಭಾಗವತರ ಸಂಗ ಬಲು ಭಂಗ ಎಲೊ ರಂಗ