ಕೀರ್ತನೆ - 192     
 
ರಾಮಾನುಜ ಮತೋದ್ಧಾರಕ ತಾಮಸಗುಣಪಾಶಗಿರಿವಜ್ರದಂಡ ವ್ಯಾಸರ ತೋಳೆಂದು ನಂದಿಯ ಧ್ವಜದಲ್ಲಿ ಹೇಸದೆ ಕಟ್ಟಿ ಪೂಜಿಪರು ನೋಡ ವ್ಯಾಸರದೊಂದು ತೋಳಿಗೆ ಶಿವಶರಣನ ಸಾಸಿರ ತೋಳ್ಗಳ ತರಿದ ನಮ್ಮಯ್ಯ ಹರಿ ಎ೦ಬ ಶಬ್ದವ ಕೇಳಿ ಪಿಟ್ಟಕ್ಕನು ಹರನ ಹೊಟ್ಟೆಯಲ್ಲಿ ಪುಟ್ಟುವೆನೆ೦ಬಳು ಹರಹರ ಎಂಬ ಶೈವರ ಏಳ್ನೂರು ಶಿರಗಳನರಿದನು ನಮ್ಮ ತಾತಯ್ಯ ಮಸ್ತಕದೊಳು ರುದ್ರ ಪಾದದೊಳಗೆ ವಿಷ್ಣು ಮಸ್ತಕ ಮಹಾದೇವ ಮೇಲೆಂಬರು ಮಸ್ತಕ ಬಂದು ಪಾದಕೆ ಬಿದ್ದು ಶರಣೆಂಬ ಮುಕ್ತಿಯ ಪಾದ ಮೇಲು ತಿಳಿದು ನೋಡಣ್ಣ ಲಿಂಗವೆ ಘನವೆಂದು ಹೆಚ್ಚಿ ಕುಣಿದಾಡುವ ಸಂಗನ ಶರಣರೆಲ್ಲರು ಕೇಳಿರಿ ಲಿ೦ಗಪ್ರಸಾದವು ಮುಟ್ಟದಂತಾಯಿತು ನಮ್ಮ ರಂಗನ ಪ್ರಸಾದವು ಲೋಕಪಾವನವು ಧರೆಯೊಳು ವಿರಕ್ತರು ವೀರ ಪವಾಡವ ಇರಿದು ಎಬ್ಬಿಸುವೆವೆಂದಾಡುವರು ಹರಿಯ ನಾಮಾವಳಿಯ ಅನುಮಾನವಿಲ್ಲದೆಯೆ ಧರಿಸಿದಲ್ಲದೆ ದೊರೆಯದು ಗತಿಯಣ್ಣ ಹರಬಂದು ಓಂಕಾರ ಗುರುವೆ ಎನ್ನುತ ಕೃಷ್ಣ ನರಮನೆಯ ಮುಂದೆ ಭಿಕ್ಷವ ಬೇಡಲು ಹರಿಯುಂಡ ಮೇಲೆ ಪ್ರಸಾದವ ನೀಡಲು ಹರ ಉಂಡು ಬ್ರಹ್ಮ ಹತ್ಯೆ ಕಳಕೊಂಡ ಶಿವ ಮಹಾದೇವನು, ಧರೆಗೆ ಹರಿಯೆ ದೈವ ಭುವನಕ್ಕೆ ಹರಿಹರರೇಕಸ್ಥರು ಭವರೋಗ ಹರ ಕಾಗಿನೆಲೆಯಾದಿಕೇಶವನ ವಿವರ ತಿಳಿದು ಭಜಿಸಿರೊ ಭಕ್ತ ಜನರು