ಕೀರ್ತನೆ - 188     
 
ಪೋಗದೋ ಛಳಿ ಪೋಗದೋ ಹಳೆಯ ಹಚ್ಚಡ ಸಕಲಾತಿ ಚಿಮ್ಮುರಿ ಟೊಪ್ಪಿಗೆ ಬಿಳಿಯ ಕಂಬಳಿ ಪೊತ್ತರೆ ಪೋಗದೋ ನಳಿನಾಕ್ಷಿಯ ತನ್ನ ತೊಡೆಯ ಮೇಗಡೆ ಇಟ್ಟು ಕಳಸ ಕುಚದ ಮೇಲೆ ಕೈಯಿಕ್ಕಿದಲ್ಲದೆ ಬಡನಡುವಿನ ಬಟ್ಟಕುಚದ ಕಾಮಿನಿರನ್ನೆ ಬೆಡಗಿನಲಿ ನಗುತ ನಲ್ಲನ ಬಳಿಗೆ ಬರಲು ಒಡನೆಯೆ ಮೋಹದಿಂ ಹಿಡಿದೆತ್ತಿ ಲಲನೆಯ ನಡುಮಂಚದ ಮೇಲೆ ಕೆಡಹಿಕೊಂಡಲ್ಲದೆ ಛಳಿಗಾರದೆ ವಿಷ್ಣು ಛಳಿಗಾರದೆ ಶಿವ ಫಳಿಲನೆ ಗಂಗೆಯ ಬೀಸಾಡಲು ಛಳಿಯ ಕಾರಣವೇನು ನೆಲೆಯಾದಿಕೇಶವ ತಿಳಿದು ನೀ ಹೇಳಯ್ಯ ಕಳಿಯ ವಿವರವನು