ಕೀರ್ತನೆ - 187     
 
ನೇಮವಿಲ್ಲದ ಹೋಮವೇತಕೆ ರಾಮನಾಮವಿರದ ಮಂತ್ರವೇತಕೆ ನೀರ ಮುಣುಗಲು ಏಕೆ ನಾರಿಯಳ ಬಿಡಲೇಕೆ ವಾರಕೊಂದುಪವಾಸ ಮಾಡಲೇಕೆ ನಾರಸಿ೦ಹನ ದಿವ್ಯನಾಮವನು ನೆನೆದರೆ ಘೋರ ಪಾತಕವೆಲ್ಲ ತೊಲಗಿ ಹೋಗುವು ಅಂಬರವ ತೊರೆಯಲೇಕೆ ತಾಂಬೂಲ ಬಿಡಲೇಕೆ ಡಂಭಕದ ವೃತ್ತಿಯಲಿ ಇರಲೇತಕೆ ಅಂಬುಜನಾಭನನು ಭಾವದಲಿ ನೆನೆದರೆ ಇಂಬುಂಟು ವೈಕುಂಠವೆಂಬ ಪುರದೊಳಗೆ ಬ೦ಧದೊಳಗೆ ಬಿದ್ದು ಹರಿಯನೆ ನೆನೆಯುತಿರೆ ಬೆಂದು ಹೋಗುವುವು ದುರಿತ೦ಗಳೆಲ್ಲ ಬ೦ದ ದುಃಖಗಳೆಲ್ಲ ನಿಲ್ಲದಲೆ ಕಳೆಯುವವು ಚೆಂದಾಗಿ ನೆಲೆಯಾದಿಕೇಶವನ ನೆನೆಯೆ