ಕೀರ್ತನೆ - 186     
 
ಧರೆಯ ಭೋಗವನ್ನು ನಂಬಿ ಹರಿಯ ಮರೆದು ಕೆಡಲು ಬೇಡ ಧರೆಯ ಭೋಗ ಕನಸಿನಂತೆ ಕೇಳು ಮಾನವ ತಿರುಕಕೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ ಒರಗಿರುತ್ತಲೊಂದು ಕನಸು ಕಂಡನೆಂತೆನೆ ಪುರದ ಅರಸು ಸತ್ತನವಗೆ ವರ ಕುಮಾರರಿಲ್ಲದಿರಲು ಕರಿಯ ಕೈಲಿ ಕುಸುಮ ಮಾಲೆಯಿತ್ತು ಪುರದೊಳು ಬಿಡಲದಾರ ಕೊರಳಿನಲ್ಲಿ ತೊಡರಿಸಲ್ಕೆ ಅವರ ಪಟ್ಟ ದೊಡೆಯರನ್ನು ಮಾಳೆವೆಂದು ಬಿಟ್ಟರಲ್ಲಿಯೆ ಒಡನೆ ತನ್ನ ಕೊರಳಿನಲ್ಲಿ ತೊಡರಿಸುವುದ ಕಂಡು ತಿರುಕ ಪೊಡವಿಯಾಣ್ಮನಾದೆನೆಂದು ಹಿಗ್ಗುತಿದ್ದನು ಪಟ್ಟಗಟ್ಟಲಾಗ ನೃಪರು ಕೊಟ್ಟರವಗೆ ಕಪ್ಪಗಳನು ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೆ ಪಟ್ಟದರಸಿಯೊಳಗೆ ಸುಖವ ಪಟ್ಟು ಮನದಿ ಹರುಷಗೊಳಲು ಪುಟ್ಟಿದವು ಹೆಣ್ಣು ಗಂಡು ಮಕ್ಕಳಾಗಲೆ ಓಲಗದೊಳಗಿರುತ ತೊಡೆಯ ಮೇಲೆ ಮಕ್ಕಳಾಡುತಿರಲು ಲೀಲೆಯಿ೦ದ ಚಾತುರಂಗ ಬಲವ ನೋಡುತ ಲೋಲನಾಗಿ ನೆನೆದು ಮನದಿ ಪೇಳೆ ಮಂತ್ರಿಗಳಿಗೆ ಆಗ ಬಾಲೆಯರನು ನೋಡಿ ಮದುವೆ ಮಾಳೆನೆಂದನು ನೋಡಿ ವರಗಳೆನುತ ಕಳುಹೆ ನೋಡಿ ಬಂದೆವೆನಲು ಜೀಯ ಮಾಡೆ ಮದುವೆ ಮಂಟಪವನು ರಚಿಸಿರೆಂದನು ಗಾಢ ಸಂಭ್ರಮದೊಳು ಕೂಡಿ ಮಾಡಿದನವ ಮದುವೆಗಳನು ರೂಢಿ ಪಾಲರೆಲ್ಲ ಕೇಳಿ ಮೆಚ್ಚುವಂದದಿ ಧನದ ಮದವು ರಾಜ್ಯ ಮದವು ವನಿತೆ ಮದವು ಸುತರ ಮದವು ಕನಸಿನಲ್ಲಿ ಕ೦ಡು ತಿರುಕ ಹಿಗ್ಗುತಿದ್ದನು ಅನಿತರೊಳಗೆ ನೃಪರ ದಂಡು ಮನೆಯ ಮುತ್ತಿದಂತೆ ಕಂಡು ಕನಸಿನಲ್ಲೆ ದಿಗಿಲುಗೊಂಡು ಕಣ್ಣು ತೆರೆದನು ಮೆರೆಯುತಿದ್ದ ಭಾಗ್ಯವೆಲ್ಲ ಹರಿದು ಹೋಯಿತೆಂದು ತಿರುಕ ತಿರಿವುದಕ್ಕೆ ನಾಚುತಿದ್ದ ಮರುಳನಂದದಿ ಸಿರಿಯು ಕನಸಿನಂತೆ ಕೇಳು ಅರಿತು ಆದಿಕೇಶವನ್ನ ಹರುಷದಿಂದ ಭಜಿಸೆ ನಿತ್ಯ ಸುಖವನೀವನು