ಕಲಿ ಹೆಚ್ಚಿ ಬ೦ದಿತಲ್ಲ, ರ೦ಗಯ್ಯ ಕಾಯೆನ್ನ ಸಿರಿಯ ನಲ್ಲ
ಬಲು ಘೋರ ಪಾತಕದಿ ಇಳೆಯು ತಲ್ಲಣಗೊಂಡು
ಕಳವಳಿಸುತಿದೆ ಕಾಲ ವಿಪರೀತದಿ
ಅತ್ತೆಯ ಸೊಸೆ ಬಯ್ವಳು - ಪುತ್ರರು ತಮ್ಮ
ಹೆತ್ತ ತಾಯಿಯ ಬಿಡುವರು
ಉತ್ತಮ ಗರತಿಗೆ ಅಪವಾದ - ಅವಿವೇಕಿಗಳು
ಎತ್ತ ನೋಡಲು ಹೆಚ್ಜೆ ಹೆದರಿಸಿತು
ನ್ಮತ್ತತನದಲಿ ಮನೆಯ ರಚಿಸುವರು
ಭಕ್ತಿಯೆ೦ಬುದ ಬಯಸದಿರುವರು
ಕತ್ತಲಾಯಿತು ಕಲಿಯ ಮಹಿಮೆ
ನಿತ್ಯ ನೇಮವು ನಿಂತಿತು - ಹೋಯಿತಲ್ಲ
ಜಾತಿಗೈಶ್ವರ್ಯ ಭೋಗಭಾಗ್ಯ
ಧಾತರಾದವರಿಗೆ ಧಾರಣೆ ಪಾರಣೆ
ಜಾತಿನೀತಿಗಳೆಲ್ಲ ಒಂದಾಗಿ
ಪಾತಕದಿ ಮನವೆರಗಿ ಮೋಹಿಸುತ
ಮಾತಾಪಿತೃ ಗುರು ದೈವ ದ್ರೋಹದಿ
ಭೂತಳವು ನಡ ನಡುಗುತಿಹುದು
ಬಿನ್ನಣ ಮಾತುಗಳು ಮತ್ತೆ ಮತ್ತೆ
ಘನ್ನ ಮತ್ತರ ಕ್ರೋಧಗಳು
ಅನ್ಯಾಯದಿಂದ ಅರ್ಥವ ಗಳಿಸುವರು
ತನ್ನ ಕಾ೦ತನ ಬಿಟ್ಟು ಸ್ತ್ರೀಯರು
ಅನ್ಯರಿಗೆ ಮನವೆರಗಿ ಮೋಹಿಪರು
ಬಣ್ಣಗೆಟ್ಟಿತು ವರ್ಣ ತಪ್ಪಿತು ಪ್ರ-
ಸನ್ನ ಶ್ರೀ ನೆಲೆಯಾದಿಕೇಶವ
Music
Courtesy:
ಸ್ಥಲ -
ವಿಷಯ -
ಸಮಾಜ ಚಿಂತನೆ: ನೀತಿಬೋಧನೆ