ಅಟ್ಟು ಇಕ್ಕದವರ ಮನೆಯ
ಅಟ್ಟು ಇಕ್ಕದವರ ಮನೆ ಪಾಯಸ ಕಜ್ಜಾಯವ
ಅಟ್ಟರೇನು ಅಡದಿದ್ದರೇನು
ನಿಚ್ಚಣಿಗೆ ದೋಟಿಗೆ ನಿಲುಕದ ಹಣ್ಣಿನ ವೃಕ್ಷ
ನಿಚ್ಚ ನಿಚ್ಚವು ಬಾಗಿ ಫಲವಾದರೇನು
ಔಚಿತ್ಯ ವಿದ್ಯೆಯನರಿಯದ ದೊರೆ ತಾನು
ಮೆಚ್ಚಿದರೇನು ಮೆಚ್ಚದಿದ್ದರೇನು
ದಾರಿದ್ರ್ಯಕ್ಕೊದಗದ ದ್ರವ್ಯ ಪದಾರ್ಥದ
ಏರಿ ಇದ್ದರೇನು ಪರ್ವತವಿದ್ದರೇನು ಶ
ರೀರ ಸೌಖ್ಯ ಶಮನಕ್ಕಾಗದ ಹೆಣ್ಣು
ಊರಲಿದ್ದರೇನು ತೌರೂರಲಿದ್ದರೇನು
ಉರಗಾದ್ರಿ ವಾಸ ನಾರಾಯಣಾದಿಕೇಶವನ
ಚರಣ ಕಮಲವನು ಸೇರಿಕೊಳ್ಳದೆ
ವರ ಶಾಪವಿಲ್ಲದ ಬಣಗು ದೈವಗಳಿಗೆ
ಶರಣೆಂದರೇನು ಶರಣೆನದಿದ್ದರೇನು
Music
Courtesy:
ಸ್ಥಲ -
ವಿಷಯ -
ಸಮಾಜ ಚಿಂತನೆ: ನೀತಿಬೋಧನೆ