ಕೀರ್ತನೆ - 168     
 
ಶೇಷಶಯನ ನಿನ್ನ ಪರಮ ಭಾಗವತರ ಸಹ ವಾಸದೊಳಿರಿಸು ಕಂಡ್ಯ ಎನ್ನನು ಬೇಸರಿಸದೆ ನಿನ್ನ ಹೃದಯಾಬ್ಜದೊಳಗಿರುವ ದಾಸರೊಳಿರಿಸು ಕಂಡ್ಯ ಎನ್ನನು ತಂದೆಯೊಡಲನು ಸೀಳಿಸಿದವರೊಳು, ದೇ- ವೇಂದ್ರನ ತಲೆಗೆ ತಂದವರೊಳು, ದು -ರ್ಗಂಧ ಪೆಣ್ಣಿಗೆ ಚಂದನದ ಕಂಪನಿತ್ತಂಥ ಬಾ೦ಧವರೊಳಗಿರಿಸು ಕಂಡ್ಯ ಎನ್ನನು ತೋಯಜವೆಂಬ ಪುಷ್ಪದ ಪೆಸರವರೊಳು ತಾಯ ಸೊಸೆಗೆ ಮಕ್ಕಳಿತ್ತವರೊಳು ಆಯದಿ ದ್ವಾದಶಿ ವ್ರತವ ಸಾಧಿಸಿದ೦ಥ ರಾಯರೊಳಿರಿಸು ಕಂಡ್ಯ ಎನ್ನನು ಗಿಳಿನಾಯಿ ಪೆಸರಿನವರೊಳು, ಮುಗಿಲ ಹೊಳೆಯ ಹೊಟ್ಟೆಲಿ ಹುಟ್ಟಿದವರೊ ಕೆಳದಿಯ ಜರಿದು ಶ್ರೀಹರಿದಿನ ಗೆದ್ದಂಥ ಹಳಬರೊಳಿರಿಸು ಕಂಡ್ಯ ಎನ್ನನು ಅಂಕಕ್ಕೆ ರಥವ ನಡೆಸಿದವರೊಳು, ನಿ- ಶ್ಯಂಕೆ ಧರ್ಮವ ಗೆದ್ದ ಹಿರಿಯರೊಳು ಲಂಕೆಯ ಅನುದಿನ ಸ್ಥಿರರಾಜ್ಯವಾಳಿದ ಕಿ೦ಕರರೊಳಿರಿಸು ಕಂಡ್ಯ ಎನ್ನನು ಕಾಟಿಗೆ ಕಾಸಿಲ್ಲದವರು ರಾಯರ ಪಂಕ್ತಿ ಊಟವ ಬಯಸಿದಂತೆ ನಾ ಬೇಡಿದೆ ನಾಟಕಧರ ನೆಲೆಯಾದಿಕೇಶವ, ನಿ- ನ್ನಾಟದೊಳಿರಿಸು ಕಂಡ್ಯ ಎನ್ನನು