ಕೀರ್ತನೆ - 167     
 
ಮುಟ್ಟಬೇಡ ಮುಟ್ಟಬೇಡ ಮುರಹರನ ದಾಸರನು ಕಟ್ಟು ಮಾಡಿದ ಯಮನು ತನ್ನ ದೂತರಿಗೆ ತಿರುಮಣಿ ತಿರುಚೂರ್ಣ ಶೃ೦ಗಾರ ಧರಿಸುವರ ಸಿರಿತುಳಸಿ ವನಮಾಲೆಯಿಂದೊಪುವವರ ತಿರುಮಂತ್ರ ತೀರ್ಥಪಸಾದಕೊಳಗಾದವರ ತಿರುಪತಿ ಯಾತ್ರೆಯನು ಮಾಡುವ ಮಹಾತ್ಮರ ಬಡವರಾಗಲಿ ಭಾಗ್ಯವ೦ತರಾಗಲಿ ಅವರು ಕಡು ಕರ್ಮಿ ಘೋರಪಾತಕರಾಗಲಿ ನಡೆನುಡಿಗೆ ಮಾಧವನ ಬಿಡದೆ ಕೊಂಡಾಡುವರ ಗೊಡವೆ ಬೇಡೆಂದು ಯಮಧರ್ಮ ಸಾರಿದನು ವಾಸುದೇವನ ವಾಸರವನಾಚರಿಸುವವರ ಬೇಸರಿಸದೆ ಹರಿಪ್ರಸಂಗ ಮಾಳ್ಪವರ ಶೇಷಶಯನ ಕಾಗಿನೆಲೆಯಾದಿಕೇಶವನ ದಾಸಾನುದಾಸರಿಗೆ ದಾಸರಾದವರ