ಕೀರ್ತನೆ - 166     
 
ಬ್ರಹ್ಮ ಲಿಖಿತವ ಮೀರಿ ಬಾಳರು೦ಟು ನಿರ್ಮಳದಿ ವೈಷ್ಣವರ ಮನಮುಟ್ಟಿ ಭಜಿಸಿ ಪಾಪಕೆ ಹೇಸದ ಶಬರ ಬಟ್ಟೆಯನು ಕಾದಿರಲು ಆ ಪಥದಿ ಸಲೆ ವೈಷ್ಣವನು ಬಂದು ಪಾಪವನು ತಪ್ಪಿಸಿ ರಾಮನಾಮವ ಕೊಡಲು ಕಾಪಥಕ ವಾಲ್ಮೀಕಿ ಮುನಿಯಾಗಲಿಲ್ಲವೆ ? ಪಂಚಮಹಾಪಾತಕವ ಮಾಡಿದ ಅಜಾಮಿಳನ ವಂಚಿಸಿ ಯಮದೂತರೆಳೆದೊಯ್ಯುತಿರಲು ಕಿಂಚಿತ್ತು ಹರಿನಾಮವನಾಕಸ್ಮಿಕದಿ ನೆನೆಯೆ ಅಂಚಿಗೆಳೆದೊಯ್ದವರು ವಿಷ್ಣುದೂತರಲ್ಲವೆ ? ಬಾಲಕ ತನ್ನ ತಾಯ್ತಂದೆಯೊಳ್‌ ಮುನಿದು ಹಲವು ಕಾಲ ವನದೊಳು ತಪವ ಮಾಡಲು ನೀಲಮೇಘಶ್ಯಾಮ ಮೆಚ್ಚಿ ಬಾಲಕನಿಗೆ ಮೇಲಾದ ಪದವಿಯನು ಕೊಡಲಿಲ್ಲವೆ ದಶಕ೦ಠನನುಜನು ಜಾನಕಿಯ ಬಿಡ ಹೇಳೆ ಅಸುರ ಕೋಪವ ತಾಳಿ ಹೊರಗಟ್ಟಿದಾಗ ಪೆಸರಗೊಳುತ ಬಂದು ಮೊರೆಹೊಕ್ಕ ವಿಭೀಷಣಗೆ ಶಶಿರವಿ ಪರ್ಯಂತ ಪಟ್ಟಗಟ್ಟಲಿಲ್ಲವೆ ? ಕಲಿಗೆ ಬೆದರುವರಲ್ಲ ಕಾಲನ ಬಾಧೆಗಳಿಲ್ಲ ಛಲದಿ ನರಳಿ ಪುಟ್ಟುವ ಗಸಣೆಯಿಲ್ಲ ಒಲಿದು ಕಾಗಿನೆಲೆಯಾದಿಕೇಶವರಾಯನ ಸಲೆ ನಂಬಿದವರಿಗೆ ಮುಕುತಿಯಿತ್ತುದಿಲ್ಲವೆ ?