ಸಿರಿಯ ಮದವೆ ಮುಕುಂದ - ನಿನ್ನ
ಚರಣ ಸೇವಕನ ಬಿನ್ನಹ ಪರಾಕೆಲೊ ದೇವ
ಅಷ್ಟದಿಕ್ಪಾಲಕರ ಮಧ್ಯದಲಿ ವೈಕುಂಠ
ಪಟ್ಟಣವು, ಸಿರಿಯೋಲಗವ ನಿತ್ಕದಿ
ಕಟ್ಟಿ ಓಲೈಸುತಿಹ ದಾಸರನಿಮಿಷರು, ಮನ
ಮುಟ್ಟಿ ಪಾಡುವ ನಾರದರ ಗೀತ ಸಂಭ್ರಮದ
ಸಕಲ ಐಸಿರಿಯ ಅಧಿದೇವಿಯೆ ಪಿರಿಯರಸಿ
ಯುಕುತಿಯೊಳು ಲೋಕಗಳ ಸೃಜಿಸುವಂಥ
ಶಕುತ ನಿನ್ನಯ ಹಿರಿಯ ಮಗನು, ಜೀವಿಗಳ ಮೋ-
ಹಕದಿ ಮರುಳು ಮಾಳ್ಬಾತ ಕಿರಿಮಗನೆಂಬ
ಬಲ್ಲಿದರಿಗೆಲ್ಲ ಬಲ್ಲಿದನೆಂಬ ಅರಿ ಹೃದಯ
ದಲ್ಲಣನೆಂಬ ಬಿರುದು ಸಾಹಸ
ಇಲ್ಲ ನಿನಗಾರು ಇದಿರೆ೦ಬ ಗರ್ವದಿ ಎನ್ನ
ಸೊಲ್ಲು ಕಿವಿ ಕೇಳದ೦ತಾಯಿತೆ ಹರಿಯೆ ?
ಶೇಷ ಹಾಸು ಮಂಚವು, ಗರುಡ ತುರುಗವು, ಪೀತ
ವಾಸದುಡುಗೆಯು, ಕೊರಳಲಿ ವೈಜಯಂತಿ
ಮೀಸಲಳಿಯದ ಪುಷ್ಪಮಾಲೆಗಳ ಧರಿಸಿ ಜಗ
ದೀಶನೆಂಬುವ ಬಿರುದು ಹೊಗಳಿಸಿಕೊಳ್ಳುವ
ಭಕ್ತವತ್ತಲನೆಂಬ ಬಿರುದು ಬಿಡು, ಅಲ್ಲದೊಡೆ
ಶಕ್ತ ಎನ್ನನು ಕಾಯೋ ಸುಲಭದಿಂದ
ಮುಕ್ತಿಯನ್ನು ಪ್ರಕಟಿಸಲು ಲೋಕದೊಳು ಭಜಕರ್ಗೆ
ಯುಕ್ತ ಕರ್ತ ಕಾಗಿನೆಲೆಯಾದಿಕೇಶವರಾಯ
Music
Courtesy:
ಸ್ಥಲ -
ವಿಷಯ -
ಜ್ಞಾನ ಭಕ್ತಿ ವೈರಾಗ್ಯ