ಕೀರ್ತನೆ - 153     
 
ಶ್ರೀರಾಮರ ಪೂಜಿಸಲಿಲ್ಲ - ಮೈಮರೆತೆನಲ್ಲ ಬಾಲತ್ವದಲಿ ಬಲು ಲೀಲೆಯಿಂದಲಿ ನಾನು ಕಾಲವ ಕಳೆದೆನಲ್ಲ - ಮೈಮರೆತೆನಲ್ಲ ಸತಿಸುತರೆ ಎನಗೆ ಗತಿಯೆಂದು ತಿಳಿದು ನಾನು ಮತಿಗೆಟ್ಟು ಭ್ರಾಂತನಾದೆನಲ್ಲ - ಮೈಮರೆತೆನಲ್ಲ ಹೊನ್ನ ಗಳಿಸಿ ಪರರಿಗೆ ಅನ್ನವಿಕ್ಕಲಿಲ್ಲ ಚೆನ್ನಕೇಶವನ ನ೦ಬಲಿಲ್ಲ - ಮೈ ಮರೆತೆನಲ್ಲ