ಕೀರ್ತನೆ - 150     
 
ಯಾತಕೆ ದಯಮಾಡಲೊಲ್ಗೆ ರಂಗಯ್ಯ - ಜಗ ನ್ನಾಥ ನಿನ್ನ ನಂಬಿದೆನಲ್ಲೊ ರಂಗಯ್ಯ ಚಿಕ್ಕಂದು ಮೊದಲೆ ನಾನು ರಂಗಯ್ಯ - ನೀನೆ ದಿಕ್ಕೆಂದು ನಂಬಿದೆನೊ ರಂಗಯ್ಯ ನೆಂಟರಿಷ್ಟರು ನೀನೆ ರಂಗಯ್ಯ - ನೀನೆ ಬಂಟರಿಗೆ ಬಂಟನಯ್ಯ ರಂಗಯ್ಯ ದಾಸರ ದಾಸನಯ್ಯ ರಂಗಯ್ಯ - ಕರ್ಮ ಪಾಶಗಳ ಮೋಚನೆ ಮಾಡೊ ರಂಗಯ್ಯ ಶೇಷಗಿರಿ ವಾಸ ರಂಗಯ್ಯ - ಆದಿ ಕೇಶವನೆ ರಕ್ಷಿಸೊ ರಂಗಯ್ಯ