ಕೀರ್ತನೆ - 148     
 
ಯಮದೂತರಿನ್ನೇನು ಮಾಡುವರು ಪೇಳೊ ರಮೆಯರಸ ರಘುನಾಥ ನಿನ್ನರಿಕೆಯುಳ್ಳವರಿಗೆ ಮಂಡಲದೊಳಗೊಬ್ಬ ಜಾರಸ್ತೀಯಳು ತನ್ನ ಗ೦ಡನರಿಕೆಯಿ೦ದ ವ್ಯಭಿಚಾರಗೈಯೆ ಮಂಡಲ ಪತಿಯು ಶೋಧಿಸಿ ಹಿಡಿದೆಳೆ ತಂದು ಭಂಡು ಮಾಡಲು ಬೆದರುವಳೆ ಕೇಳೆಲೊ ಹರಿ ಕಳವಿನ ಒಡವೆಯ ಒಡೆಯಗೆ ಪಾಲೀವ ಕಳಬ೦ಟ ಕನ್ನವ ಕೊರೆಯುತಿರೆ ಕಳವು ಮಾಡಿದನೆಂದು ಹಿಡಿದೆಳೆತಂದರೆ ತಳವಾರನೇನು ಮಾಡುವನು ಕೇಳೆಲೊ ಹರಿ ಮನವಚನದಲಿ ಮಾಡಿದ ಪುಣ್ಯ ಪಾಪಗಳ ನಿನಗರ್ಪಿಸುವೆ ಕಾಲಕಾಲದಲಿ ಘನ ಕೃಪಾಂಬುಧಿ ಕಾಗಿನೆಲೆಯಾದಿಕೇಶವ ಎನಗೆ ಆರೇನು ಮಾಡುವರು ಕೇಳೆಲೊ ಹರಿ