ಮಣ್ಣಿನ ಮಹಿಮೆ ಮನುಜ ನೀನರಿಯೆ
ಷಣ್ಮಹಿಷಿಯುತ ಸರ್ವೋತ್ತಮನ ಲೀಲೆ
ಮಣ್ಣಲಿ ದೊರಕಿದಳು ಮಾತಾಯಿ ಸೀತಾ
ಮಣ್ಣಳೆದ ವಾಮನ ಮಹಬಲಿಯ ಬೇಡಿ
ಮಣ್ಣು ಪಾವನವಾಯ್ತು ರಾಮಪದ ಸ್ಪರ್ಶದಿ
ಮಣ್ಣುಂಡ ಬಾಯಲಿ ಬ್ರಹ್ಮಾಂಡ ತೋರಿದ ಕೃಷ್ಣ
ಮಣ್ಣಿಗೇ ನಡೆಯಿತು ಮಹಾಭಾರತ ಯುದ್ಧ
ಮಣ್ಣಿಗೇ ಮಡಿದರ ಸಂಖ್ಯೆಗೆಣೆಯಿಲ್ಲ
ಮಣ್ಣಲಿ ಬಿತ್ತೆ ಬೀಜ ಮಹಾವೃಕ್ಷವಾಗುವುದು
ಅಣ್ಣ ನಮ್ಮಾದಿಕೇಶವನು ಅನುಗ್ರಹದಿಂ
Music
Courtesy:
ಸ್ಥಲ -
ವಿಷಯ -
ಜ್ಞಾನ ಭಕ್ತಿ ವೈರಾಗ್ಯ