ಭವತಿ ಭಿಕ್ಷಾಂ ದೇಹಿ ಪರಬ್ರಹ್ಮ
ಭವದೂರ ಮಾಂಪಾಹಿ
ಭುವನ ಪಾವನ ಪರಮಾನಂದ ವರಗುಣಾ
ಸುವಿಮಲ ಶಾಂತಿ ಸದ್ಭಕ್ತಿ ಜೀವನ್ಮುಕ್ತಿ
ನಿತ್ಯ ನಿರ್ಮಲ ಜ್ಞಾನ ವಿಚಾರ ಪ್ರ-
ವೃತ್ತಿ ವಿವೇಕದಾನ
ಸತ್ಯ ಸದ್ವಿನಿಯ ಸಶ್ರವಣ ಮಾನಸಯೋಗ
ಚಿತ್ತ ನಿಧಿಧ್ಯಾಸ ಜಪತಪವ್ರತ ಪೂಜಾ
ದೋಷರಹಿತ ಭಾಷ ದುರಿತಗುಣ
ನಾಶ ಪರಮ ಸಂತೋಷ
ಕ್ಲೇಶ ವಿದೂರ ವಿಶೇಷ ವಿರಾಗ
ವಿಶ್ವಾಸ ವಿಹಿತ ಸದ್ಧರ್ಮ ವಿಚಾರ
ಪಾವನ ಪರಿಪೂರ್ಣ ಹೃದಯ ಸದಾ
ದೇವ ನಾಮಸ್ಮರಣ
ಭಾವ ಭರಿತ ಧ್ಯಾನ ಧಾರಣಯೋಗ ಸ
ದ್ಭಾವ ಬ್ರಹ್ಮ ಆದಿಕೇಶವ ದಾಸತೆ